ಉಚಿತ ನೇತ್ರ, ಚರ್ಮರೋಗ ಚಿಕಿತ್ಸಾ ಶಿಬಿರ
ಬೆಳ್ಳಾರೆಯ ಕಲ್ಪವೃಕ್ಷ ಆರ್ಕೇಡ್ ನಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ ಕಾಮತ್ ಮತ್ತು ಶ್ರೀಮತಿ ಸರಸ್ವತಿ ಕಾಮತ್ ರವರ ಮಾಲಕತ್ವದ ಕಾಮತ್ ಮೆಡಿಕಲ್ಸ್ ಮಾ.27 ರಂದು ಉದ್ಘಾಟನೆಗೊಳ್ಳಲಿದೆ.
ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬಿ.ರಮಾನಾಥ ರೈ ನೂತನ ಮಡಿಕಲ್ ನ್ನು ಉದ್ಘಾಟಿಸಲಿದ್ದಾರೆ.
ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್.ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಕಾಮಧೇನು ಗ್ರೂಪ್ಸ್ ಮಾಲಕ ಎಂ.ಮಾಧವ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣ ವಿನಯಚಂದ್ರ, ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥ ಹಾಗೂ ಇತರ ಗಣ್ಯರು ಉಪಸ್ಥಿತರಿರುವರು.
ಉಚಿತ ನೇತ್ರ, ಚರ್ಮರೋಗ ಚಿಕಿತ್ಸಾ ಶಿಬಿರ
ವಾಣಿಜ್ಯ ವರ್ತಕ ಕೈಗಾರಿಕಾ ಸಂಘ ಬೆಳ್ಳಾರೆ,ಕಾಮಧೇನು ಮಲ್ಟಿಪರ್ಪಸ್ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ, ಕಾಮತ್ ಮೆಡಿಕಲ್ ಗ್ರೂಪ್ ಬೆಳ್ಳಾರೆ, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಸಾರ್ವಜನಿಕ ಸರಕಾರಿ ಆಸ್ಪತ್ರೆ ಸುಳ್ಯ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಸುಳ್ಯ, ಆಪ್ಟಿಕಲ್ ಲ್ಯಾಂಡ್ ,ಅಮ್ಮು ರೈ ಕಾಂಪ್ಲೆಕ್ಸ್ ಬೆಳ್ಳಾರೆ ಇದರ ಸಹಯೋಗದಲ್ಲಿ ಉಚಿತ ನೇತ್ರ ಮತ್ತು ಚರ್ಮ ರೋಗ ಚಿಕಿತ್ಸಾ ಶಿಬಿರವು ಮಾ.27 ರಂದು ಕಲ್ಪವೃಕ್ಷ ಆರ್ಕೇಡ್ ನಲ್ಲಿ ಬೆಳಿಗ್ಗೆ ಗಂಟೆ 9.30 ರಿಂದ 12.30 ರವರೆಗೆ ನಡೆಯಲಿದೆ.
ಉಚಿತ ಕಣ್ಣಿನ ಪರೀಕ್ಷೆ ಮತ್ತು ಸಲಹೆ,ಉಚಿತ ಕಣ್ಣಿನ ಪೊರೆ ಆಪರೇಶನ್, ಉಚಿತ ಪ್ರಯಾಣ, ವಸತಿ, ಊಟ,ಮತ್ತು ಉಪಹಾರ ಹಾಗೂ ಉಚಿತ ಕನ್ನಡಕ ವಿತರಣೆ ನಡೆಯಲಿದೆ.
ಉಚಿತ ಚರ್ಮ ರೋಗ ತಪಾಸಣೆ,ಚಿಕಿತ್ಸೆ ಮತ್ತು ಸಲಹೆ ನೀಡಲಾಗುವುದು.
ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು ,ಮಂಗಳೂರಿನ ಖ್ಯಾತ ಜಿಲ್ಲಾ ಆಸ್ಪತ್ರೆ ,ಸಂಚಾರಿ ನೇತ್ರ ಘಟಕ, ತಾಲೂಕು ಸಾರ್ವಜನಿಕ ಆಸ್ಪತ್ರೆ ಸುಳ್ಯ ಇದರ ಪ್ರಸಿದ್ಧ ನೇತ್ರ ತಜ್ಞರು ಭಾಗವಹಿಸಲಿದ್ದಾರೆ.
ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಇವರ ವತಿಯಿಂದ ಉಚಿತ ಲಭ್ಯ ಕನ್ನಡಕಗಳನ್ನು ವಿತರಿಸಲಾಗುವುದು.