Breaking News

ತೊಡಿಕಾನ : ಬಡ ಕುಟುಂಬಕ್ಕೆ ಮನೆಯ ಮೇಲ್ಚಾವಣಿ ನಿರ್ಮಿಸಿ ಕೊಟ್ಡು ಮಾನವೀಯತೆ ಮೆರೆದ ಗ್ರಾಮಸ್ಥರು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ತೊಡಿಕಾನ ಗ್ರಾಮದ ಚಾಂಬಾಡು ಗೋಪಾಲ ಸಪಲ್ಯ ಕುಟುಂಬ ಅನಾರೋಗ್ಯಕ್ಕೆ ಒಳಗಾಗಿ ಬಡತನದಿಂದ ಬಳಲುತ್ತಿದ್ದು ಅವರ ಮನೆಯ ಮೇಲ್ಚಾವಣಿ ಕುಸಿದ ಹಿನ್ನಲೆಯಲ್ಲಿ ಮೇಲ್ಚಾವಣಿಯನ್ನು ಊರವರು ಉಚಿತವಾಗಿ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.


ಗೋಪಾಲರ ಮಗ ಹರೀಶ ಎಂಬಾತ ಎರಡು ವರ್ಷಗಳ ಹಿಂದೆ ಕಿಡ್ನಿ ವೈಫಲ್ಯಗೊಂಡು ನಿಧನರಾಗಿದ್ದರು. ಇದೀಗ ವ್ರದ್ದ ಗೋಪಾಲರಿಗೆ ಅನಾರೋಗ್ಯ ಕಾಡುತ್ತಿದ್ದು ಕೆಲಸ ಮಾಡಲು ಆಗುತ್ತಿಲ್ಲ.ಪತ್ನಿ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾರೆ.ಸೊಸೆಯೊಬ್ಬಳು ಬೀಡಿ ಕಟ್ಟಿ ಕುಟುಂಬ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.ಇಬ್ಬರು ಮೊಮ್ಮಕ್ಕಳು ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಈ ಕಷ್ಟಗಳ ನಡುವೆ ಅವರಿಗೆ ಕುಸಿದ ಮೇಲ್ಚಾವಣಿಯನ್ನು ದುರಸ್ತಿ ಮಾಡಿಸಲು ಅರ್ಥಿಕ ಸಮಸ್ಯೆ ಎದುರಾಗಿತ್ತು. ಗ್ರಾಮ ಪಂಚಾಯತ್ ನಲ್ಲಿ ಮನೆ ದುರಸ್ತಿಗೆ ಅನುದಾನ ನೀಡಲು ಅವಕಾಶ ಇಲ್ಲ ಎಂದು ಮಾಹಿತಿ ದೊರೆಯಿತು.ಈ ಹಿನ್ನಲೆಯಲ್ಲಿ ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ರಮಣ ಅವರ ಗಮನಕ್ಕೆ ಈ ವಿಷಯ ತಿಳಿದು ಬಂದು ಕುಟುಂಬದ ಸಂಕಷ್ಟವನ್ನು ಅರಿತುಕೊಂಡ ಅವರು ಸ್ಥಳೀಯರಾದ ಎ.ಜಿ ಸುಧಾಕರ ಅವರೊಂದಿಗೆ ವೆಂಕಟ್ರಮಣ ಅವರು ಮಾತನಾಡಿಕೊಂಡು ಸ್ಥಳೀಯ 15 ಜನರ ಯುವಕರ ತಂಡ ರಚಿಸಿಕೊಂಡು ಮೇಲ್ಚಾವಣಿ ನಿರ್ಮಿಸುವ ಕೆಲಸ ಮಾಡಿದರು. ಸುಮಾರು ಮೂರುವರೆ ದಿನಗಳ ಕಾಲ ಕೆಲಸ ನಡೆಸಿ ಮೇಲ್ಚಾವಣಿ ಕೆಲಸವನ್ನು ಪೂರ್ಣಗೊಳಿಸಿ ಕೊಟ್ಟಿದ್ದಾರೆ. ತಂಡಕ್ಕೆ ಊಟ ಉಪಹಾರದ ಖರ್ಚನ್ನು ,ಮೇಲ್ಚಾವಣಿ ನಿರ್ಮಿಸಲು ಬೇಕಾದ ಮೊಳೆಗಳ ಖರೀದಿಯ ಖರ್ಚನ್ನು ಕೂಡ ತಂಡ ಭರಿಸಿದೆ. ಇದರಿಂದ ಬಡ ಕುಟುಂಬ ಸಂತೋಷಗೊಂಡಿದ್ದು ವೆಂಕಟ್ರಮಣ ಪೆತ್ತಾಜೆ ಹಾಗೂ ಎ.ಜಿ ಸುಧಾಕರ ತಂಡಕ್ಕೆ ಕ್ರತಜ್ಜತೆ ಸಲ್ಲಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.