ದೈಹಿಕ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು-ಶ್ರೀಮತಿ ಗಿರಿಜಾ ಕೆದಿಲ
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ ಸಿಬ್ಬಂದಿ ವರ್ಗದವರ ಆಶ್ರಯದಲ್ಲಿ 4 ನೇ ವರುಷದ ಮುಕ್ತ ಕಿರಿಯ ಬಾಲಕ ಮತ್ತು ಬಾಲಕಿಯರ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟ ‘ಉತ್ಕರ್ಷ ಸಹಕಾರ ಟ್ರೋಫಿ 2021’ ಮಾ. 21.ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉತ್ಕರ್ಷ ಸಹಕಾರ ಸೌಧ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಗಿರಿಜಾ ಉದ್ಘಾಟಿಸಿ ಮಾತನಾಡಿ “ಮನುಷ್ಯನ ದೈಹಿಕ, ಮಾನಸಿಕ ಉತ್ತಮ ಆರೋಗ್ಯಕರ ಜೀವನಕ್ಕೆ ಕ್ರೀಡೆಗಳು ಅತೀ ಅವಶ್ಯ “ಎಂದು ಅವರು ಹೇಳಿದರು.ಶುಭ ಹಾರೈಸಿದರು.ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ವಹಿಸಿದ್ದರು.ಅತಿಥಿಯಾಗಿ ಸಹಕಾರ ಸಂಘಗಳ ಮೇಲ್ವಿಚಾರಕ ಪ್ರದೀಪ್ ಕುಮಾರ್ ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಕವಿತಾ ಪ್ರಾರ್ಥಿಸಿದರು.ನೇಮಿರಾಜ್ ಪಲ್ಲೋಡಿ ಸ್ವಾಗತಿಸಿದರು.ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು.ಸುದೀಪ್ ರೈ ವಂದಿಸಿದರು.
ಪಂದ್ಯಾಟದಲ್ಲಿ ಬಾಲಕರ
22 ತಂಡ ಮತ್ತು ಬಾಲಕಿಯರ 5 ತಂಡಗಳು ಪಾಲ್ಗೊಂಡಿವೆ. ಪಂದ್ಯಾಟಕ್ಕೆ ರಾಜ ಮತ್ತು ಜಯ ಹೆಸರಿನ ಎರಡು ಕ್ರೀಡಾಂಗಣ ನಿರ್ಮಿಸಲಾಗಿದೆ. ನಿವೃತ್ತ ಯುವ ಜನ ಸೇವಾ ಮತ್ತು ಕ್ರೀಡಾಧಿಕಾರಿ ಬಿ ಕೆ ಮಾಧವ ಗೌಡ ಮತ್ತು ಪ್ರಗತಿ ಪರ ಕೃಷಿಕ ಭಾಸ್ಕರ ರೈ ಪಡ್ಯೋಟು ಕ್ರೀಡಾಂಗಣಕ್ಕೆ ತೆಂಗಿನ ಕಾಯಿ ಒಡೆದರು.
ಸಂಘದ ಉಪಾಧ್ಯಕ್ಷ ಲಿಗೋಧರ ಆಚಾರ್ಯ,
ನಿರ್ದೇಶಕರಾದ ಶ್ರೀಕೃಷ್ಣ ಭಟ್ ಪಟೋಳಿ, ಗಣೇಶ್ ಪೈ,ಮುದರ ಐವತ್ತೊಕ್ಲು ಮೊದಲಾದವರು ಉಪಸ್ಥಿತರಿದ್ದರು.