ಬಜೆಟ್ ನಲ್ಲಿ ಘೋಷಿಸಿದ ಪರಿಹಾರ ಅಡಿಕೆ ಬೆಳೆಗಾರರಿಗೆ ನೇರ ದೊರಕಿಸಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ತೋಟಗಾರಿಕಾ ಸಚಿವರಿಗೆ ನಿಯೋಗ ಒತ್ತಾಯ

 

ಈ ವರ್ಷದ ಕರ್ನಾಟಕ ರಾಜ್ಯದ ಬಜೆಟಿನಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ನವರು ಘೋಷಣೆ ಮಾಡಿದ ೨೫ ಕೋಟಿ ರೂಪಾಯಿಯೂ ಹಳದಿ ರೋಗ ಬಾಧಿತ ಅಡಿಕೆ ಬೆಳೆಗಾರ ರೈತರಿಗೆ ನೇರವಾಗಿ ಸಿಗುವಂತಾಗಬೇಕು ಎಂದು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಅವರ ನೇತೃತ್ವದ ತಂಡವು ರಾಜ್ಯದ ತೋಟಗಾರಿಕಾ ಸಚಿವರಾದ ಆರ್. ಶಂಕರ್‌ರವರಿಗೆ ಮನವಿ ಮಾಡಲಾಯಿತು.
ಮಾ. ೨೧ರಂದು ಸುಳ್ಯಕ್ಕೆ ಭೇಟಿ ನೀಡಿದ ತೋಟಗಾರಿಕಾ ಸಚಿವರನ್ನು ಸುಳ್ಯ ಬಿಜೆಪಿ ಮಂಡಲ ಸಮಿತಿ ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಭೇಟಿ ಮಾಡಿ ಈ ಕುರಿತು ಮನವಿ ಮಾಡಿತ್ತು. ಮನವಿ ಸ್ವೀಕರಿಸಿದ ಸಚಿವರು, ಮೀನುಗಾರಿಕಾ ಸಚಿವರಾದ ಎಸ್. ಅಂಗಾರ ಮತ್ತು ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮತ್ತು ಕರಾವಳಿ ಭಾಗದ ಶಾಸಕರ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಭೆಯನ್ನು ತಕ್ಷಣ ಕರೆದು ಹಳದಿ ರೋಗ ಬಾಧಿತ ಅಡಿಕೆ ಬೆಳೆಯುವ ರೈತರ ಸಂಕಷ್ಟಕ್ಕೆ ಆದಷ್ಟು ಬೇಗ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕ, ಬಿಜೆಪಿ ರೈತ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾದ ಮಹೇಶ್ ಕುಮಾರ್ ಮೇನಾಲ,ಸುಳ್ಯ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಜಿನ್ನಪ್ಪ ಪೂಜಾರಿ,ಸುಳ್ಯ ಸಿಎ ಬ್ಯಾಂಕಿನ ಅಧ್ಯಕ್ಷರಾದ ಹರೀಶ್ ಬೂಡುಪನ್ನೆ,ಸುಳ್ಯ ಬಿಜೆಪಿ ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಕೇರ್ಪಳ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸೋಮನಾಥ ಪೂಜಾರಿ, ಆಲೆಟ್ಟಿ ಶಕ್ತಿಕೇಂದ್ರದ ಬಿಜೆಪಿ ಅಧ್ಯಕ್ಷರಾದ ಜಗದೀಶ್ ಸರಳಿ ಕುಂಜ, ಮತ್ತು ಅನಿಲ್ ಪರಿವಾರಕಾನ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.