ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ ಸಿಬ್ಬಂದಿ ವರ್ಗದವರ ಆಶ್ರಯದಲ್ಲಿ ಮುಕ್ತ ಕಿರಿಯ ಬಾಲಕ ಮತ್ತು ಬಾಲಕಿಯರ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟ ‘ಉತ್ಕರ್ಷ ಸಹಕಾರ ಟ್ರೋಫಿ 2021’ ಮಾ. 21.ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉತ್ಕರ್ಷ ಸಹಕಾರ ಸೌಧ ವಠಾರದಲ್ಲಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಲಿಗೋಧರ ಆಚಾರ್ಯ ನಾಯರ್ ಕೆರೆ ಸಭಾಧ್ಯಕ್ಷತೆ ವಹಿಸಿ ಮಾತನಾಡಿ “ನಮ್ಮ ಸಂಘದ ಸಿಬ್ಬಂದಿಗಳು ಸತತ ನಾಲ್ಕು ವರ್ಷಗಳಿಂದ ಅತ್ಯಂತ ಶಿಸ್ತುಬದ್ಧವಾಗಿ ,ಅಚ್ಚುಕಟ್ಟಾಗಿ ಪಂದ್ಯಾಟವನ್ನು ನಡೆಸುತ್ತಾ ಬಂದಿರುವುದು ವಿಶೇಷವಾಗಿ ಹೆಮ್ಮೆಯ ವಿಚಾರ. ಇಂತಹ ಪಂದ್ಯಾಟಗಳಿಂದ ಅನೇಕ ಪ್ರತಿಭೆಗಳು ಅನಾವರಣಗೊಳ್ಳುತ್ತದೆ, ಉತ್ತಮ ಪ್ರಜೆಗಳ ರೂಪಿಸಲು ಕಾರಣವಾಗುತ್ತದೆ.”ಎಂದು ಹೇಳಿದರು.
ಅತಿಥಿಯಾಗಿ ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಸೋಮಶೇಖರ ನೇರಳ ,.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ
ಲೋಹಿತ್ ಎಣ್ಣೆಮಜಲು ಸ್ವಾಗತಿಸಿದರು. ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು.ಶ್ರೀಮತಿ ಕವಿತಾ ಕೃಷ್ಣನಗರ ಬಹುಮಾನ ವಿಜೇತರ ಪಟ್ಟಿ ಪ್ರಕಟಿಸಿದರು. ಕುಸುಮಾಧರ ಕಕ್ಯಾನ ವಂದಿಸಿದರು.
*ಫಲಿತಾಂಶ*
ಬಾಲಕರ ವಿಭಾಗದಲ್ಲಿ ಕೌಶಿಕ್ ಮತ್ತು ಕಾರ್ತಿಕ್ ಪ್ರಥಮ , ಕೌಶಿಕ್ ಮತ್ತು ತುಷಾರ್ ದ್ವಿತೀಯ , ಮಂಜುನಾಥ್ ಮತ್ತು ಲವಿತ್ ತೃತೀಯ , ಹೃದಯಿ ಮತ್ತು ಹಿತೇಶ್
ಚತುರ್ಥ ಸ್ಥಾನವನ್ನು ಗಳಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಲಕ್ಷ್ಯ ಚೌಹಣ್ ಮತ್ತು ತಪಸ್ಯ ಎಸ್ ನಾಯಕ್ ಪ್ರಥಮ ,ಎ ಜಿ ಪ್ರಾಚಿ ಪವಾರ್ ಮತ್ತು ಸೃಷ್ಟಿ ಯಂ
ದ್ವಿತೀಯ,ನಿರೀಕ್ಷಾ ಶೆಟ್ಟಿ ಮತ್ತು ಅಮೂಲ್ಯ ಕಮಿಲ ತೃತೀಯ,ಮೋಕ್ಷಿತಾ ಕೆ ಆರ್ ಮತ್ತು
ಜ್ಞಾನ್ವಿ ವೈ ಎನ್ ಚತುರ್ಥ ಸ್ಥಾನ ಗಳಿಸಿದ್ದಾರೆ. ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ನಿರ್ದೇಶಕರಾದ ಚಿನ್ನಪ್ಪಗೌಡ ಚೊಟ್ಟೆಮಜಲು,ಮುದರ ಐವತ್ತೊಕ್ಲು, ಶ್ರೀಮತಿ ಮೋಹಿನಿ ಬೊಳ್ಮಲೆ, ಶ್ರೀಮತಿಹೇಮಲತಾ ಚಿದ್ಗಲ್ಲು. ಸಂಘದ ಸಿಬ್ಬಂದಿಗಳು, ಮೊದಲಾದವರು ಉಪಸ್ಥಿತರಿದ್ದರು.