ನೇಮೋತ್ಸವಕ್ಕೆ ಶುಭಕೋರುವ ಬ್ಯಾನರ್ ಅಳವಡಿಕೆ
ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿಚೆನ್ನಯ್ಯ ಗರಡಿಯಲ್ಲಿ ಮಾ. 27 ರಂದು ವರ್ಷಾವಧಿ ನೇಮೋತ್ಸವ ನಡೆಯಲಿರುವುದು.
ಆ ಪ್ರಯುಕ್ತ ಗರಡಿಗೆ ಹೋಗುವ ಪ್ರಧಾನ ರಸ್ತೆಯನ್ನು ಯುನೈಟೆಡ್ ಇನ್ಸೂರೆನ್ಸ್ ಸಲಹೆಗಾರರಾದ ಸುಜಿತ್ ರೈ ಪಟ್ಟೆಯವರ ನೇತೃತ್ವದಲ್ಲಿ, ಊರವರ ಸಹಕಾರದಲ್ಲಿ, ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ನಿಂತಿಕಲ್ಲಿನಲ್ಲಿ ನಡೆದ ಶುಚಿತ್ವ ಕಾರ್ಯಕ್ರಮದಲ್ಲಿ ಉದ್ಧೇಶದ ಬಗ್ಗೆ ಸುಜಿತ್ ರೈ ಪಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕೋಟಿಚೆನ್ನಯ ಪಾತ್ರಿಗಳಾದ ಹರೀಶ್, ಗಿರೀಶ್ ವಾಮದಪದವು, ಎಡಮಂಗಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ರೇವತಿ ರಘು ಎಣ್ಮೂರು, ಸದಸ್ಯ ಮಾಯಿಲಪ್ಪ ಗೌಡ ಪಟ್ಟೆ, ನಿವೃತ್ತ ಶಿಕ್ಷಕ ಶ್ರೀನಿವಾಸ ರೈ ಪಟ್ಟೆ ಎಣ್ಮೂರು, ಎಣ್ಮೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ರಾಜೀವಿ ರೈ, ಸುಳ್ಯ ತಾಲೂಕು ಕಿಶನ್ ಸಂಘದ ಅಧ್ಯಕ್ಷ ಎನ್.ಜಿ. ಪ್ರಭಾಕರ ರೈ ಎಣ್ಮೂರು, ಗರಡಿ ಮಾಹಿತಿದಾರ ಎನ್. ಲೋಕನಾಥ ರೈ ಪಟ್ಟೆ, ರಿಕ್ಷಾ ಚಾಲಕ -ಮಾಲಕರು, ಜೀಪು-ಪಿಕಪ್, ಟೆಂಪೋ ಚಾಲಕ, ಮಾಲಕರು, ಅಂಗಡಿ ಮಾಲಕರು ಉಪಸ್ಥಿತರಿದ್ದು ಸಹಕರಿಸಿದರು.
ಲೋಕನಾಥ ರೈ ಎನ್.ಜಿ. ವಂದಿಸಿದರು. ಬಳಿಕ ಎಣ್ಮೂರು ಗರಡಿಗೆ ತೆರಳುವ ಪ್ರಧಾನ ರಸ್ತೆ ನಿಂತಿಕಲ್ಲು -ಅಲೆಕ್ಕಾಡಿ-ಕೇರ್ಪಡ, ಕರಿಂಬಿಲ-ಸೂಲಂತ್ತಡ್ಕದವರೆಗೆ ಎರಡೂ ಕಡೆಯ ಗಿಡ ಗಂಟಿಗಳನ್ನು ತೆರವುಗೊಳಿಸಿ ಸುಮಾರು ೩೩೦ ಶುಭಕೋರುವ ಬ್ಯಾನರ್ಗಳನ್ನು ಅಳವಡಿಸುವ ಕಾರ್ಯಕ್ರಮ ನಡೆಯುತ್ತಿದೆ.