Breaking News

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ : ಸಮಗ್ರ ಸುಸ್ಥಿರ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪರಿಸರ ಸಂರಕ್ಷಣೆಯೊಂದಿಗೆ ತಾಂತ್ರಿಕತೆ ಅಳವಡಿಸಿಕೊಂಡು ಕೃಷಿ ಮಾಡಬೇಕು – ಡಾ.ಹುಲ್ಲುನಾಚೆ ಗೌಡ

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಮಗ್ರ ಸುಸ್ಥಿರ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರವು ಮಾ.22 ರಂದು ಸಂಘದ ವಠಾರದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಹಿತಿ ಕಾರ್ಯಗಾರವನ್ನು ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಖ್ಯಾತ ಸಾವಯವ ಕೃಷಿ ತಜ್ಞ ಡಾ.ಹುಲ್ಲುನಾಚೆ ಗೌಡರವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿ ಇಡೀ ವಿಶ್ವದಲ್ಲಿ ಇರುವವರೆಲ್ಲರೂ ಸಮಸ್ಯೆಗಳಿಗೆ ಉತ್ತರವನ್ನು ಹುಡುಕುತ್ತಿದ್ದೇವೆ.ಕೃಷಿ ಉದ್ಯಮ ಚಾಲೆಂಜ್ ಆಗಿದೆ.
ಇದು ಉತ್ತರ ಹುಡುಕುವ ಕಾರ್ಯಕ್ರಮವಾಗಿದೆ.
ಪರಿಸರ ಸಂರಕ್ಷಣೆ ಮಾಡಿ ಕೃಷಿ ಉದ್ಯಮ ಮಾಡಬೇಕು.
ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಕೃಷಿ ಮಾಡಬೇಕು.
ಭೂಮಿಯ ಫಲವತ್ತತೆ ಬಹು ಮುಖ್ಯ.ಮಣ್ಣಿನ ಮೂರು ಗುಣಗಳನ್ನು ಕೃಷಿಕ ತಿಳಿದುಕೊಳ್ಳಬೇಕು.
ಮಣ್ಣಿನ ಜೈವಿಕ ಗುಣ, ಮಣ್ಣಿನ ಭೌತಿಕ ಗುಣ, ರಾಸಾಯನಿಕ ಗುಣಗಳನ್ನು ತಿಳಿದುಕೊಳ್ಳಬೇಕು.ಎರೆಹುಳ ಸಂರಕ್ಷಣೆ ಮಾಡಬೇಕು.ಎರೆಹುಳದಲ್ಲಿ ಪೋಷಕಾಂಶಗಳಿದ್ದು ಅಂತರಾಳದಲ್ಲಿ ತೇವಾಂಶವಿರುವಂತೆ ಮಾಡುತ್ತದೆ.ಎರೆಹುಳ ಇದ್ದಲ್ಲಿ ಫಲವತ್ತತೆ ಇರುತ್ತದೆ ಎಂದು ಹೇಳಿದರು.
ಒಡಿಯೂರು ವಿವಿದೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ.ಸುರೇಶ ರೈ ಉಪಸ್ಥಿತರಿದ್ದು ಮಾತನಾಡಿದರು.
ಸಾವಯವ ಇಂಗಾಲ, ಮಣ್ಣಿನ ಫಲವತ್ತತೆ, ತ್ಯಾಜ್ಯಗಳ ಮೌಲ್ಯವರ್ಧನೆ, ಸಮಗ್ರ ಬೆಳೆಪದ್ಧತಿ, ಉಪಕಸುಬುಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸದ್ ಸಿ.ಕೆ.ಸ್ವಾಗತಿಸಿ,ಅಜಿತ್ ನಿಡುಬೆ ಕಾರ್ಯಕ್ರಮ ನಿರೂಪಿಸಿದರು.
ಸಂಘದ ನಿರ್ದೇಶಕರು,ಸದಸ್ಯರು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.