ಇಂದು ವಿಶ್ವ ಜಲ ದಿನ

Advt_Headding_Middle
Advt_Headding_Middle

ಜಲವೆಂಬ ಭರಿಸಲಾಗದ ಹೊನ್ನನ್ನು ಉಳಿಸಿ;

“water is life’s matter and matrix, mother and medium. There is no life without water.”
ವಿಶ್ವದ ಸುಮಾರು 2.2 ಬಿಲಿಯನ್ ಜನರು ಶುದ್ಧ ನೀರನ್ನು ಉಪಯೋಗಿಸುವ ಅವಕಾಶದಿಂದ ವಂಚಿತರಾಗಿರುವರು. ಈ ಜಾಗತಿಕ ನೀರಿನ ಬಿಕ್ಕಟ್ಟಿನ ಬಗ್ಗೆ, ಎಲ್ಲರಿಗೂ ಶುದ್ಧ ನೀರು ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶ್ವಸಂಸ್ಥೆಯು 1993 ನೇ ವರ್ಷದಿಂದ ಪ್ರತೀ ವರ್ಷ ಮಾರ್ಚ್ 22 ನ್ನು ವಿಶ್ವ ಜಲ ದಿನವೆಂದು ಘೋಷಿಸಿದೆ.

ವಿಶ್ವ ಜಲ ದಿನದ ಉದ್ದೇಶ ಶುದ್ಧ ನೀರಿನ ಮಹತ್ವವನ್ನು ತಿಳಿಸುವುದು. ಆದುದರಿಂದ ಮಾಚ್ 22 ನ್ನು ಶುದ್ಧ ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ಬಗೆಗೆ ಸಲಹೆ ನೀಡಲು ಬಳಸಲಾಗುತ್ತದೆ. ಅಂತೆಯೇ ಪ್ರತಿವರ್ಷವು ಶುದ್ಧನೀರು, ನೈರ್ಮಲ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಕೇಂದ್ರೀಕೃತವಾಗಿರಿಸಿಕೊಂಡು ವಿಶ್ವ ಜಲ ದಿನ ದಿನಾಚರಣೆಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ.

ಇಂದು ಬೆಳೆಯುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ಕೃಷಿ ಉದ್ಯಮದ ಬೇಡಿಕೆಗಳು, ಹವಾಮಾನ ವೈಪರೀತ್ಯದ ಪರಿಣಾಮವಾಗಿ ನೀರಿನ ಬಿಕ್ಕಟ್ಟು ವಿಶ್ವದೆಲ್ಲೆಡೆ ತಲೆದೋರಿದೆ. ಅದರಂತೆಯೇ ನೀರು ಎಂದರೇನು? ಅದರ ಮೌಲ್ಯ ಮತ್ತು ಈ ಪ್ರಮುಖ ಸಂಪನ್ಮೂಲವನ್ನು ನಾವು ಹೇಗೆ ಉತ್ತಮವಾಗಿ ರಕ್ಷಿಸಬಹುದು ಎಂಬುವುದನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ವಿಶ್ವ ಜಲ ದಿನವನ್ನು ಮೌಲ್ಯಯುತ ನೀರು ಎಂಬ ವಿಷಯದಡಿಯಲ್ಲಿ ಆಚರಿಸಲಾಗುತ್ತಿದೆ.
ನೀರು ನಮ್ಮ ಮನೆ, ಸಂಸ್ಕೃತಿ, ಆರೋಗ್ಯ, ಶಿಕ್ಷಣ, ಆರ್ಥಿಕತೆ ಮತ್ತು ನಮ್ಮ ನೈಸರ್ಗಿಕ ಪರಿಸರದ ಸಮಗ್ರತೆ ಮುಂತಾದ ಅಗಾಧ ಮತ್ತು ಸಂಕೀರ್ಣ ಮೌಲ್ಯವನ್ನು ಹೊಂದಿದೆ. ಈ ಯಾವುದೇ ಮೌಲ್ಯಗಳನ್ನು ನಾವು ಕಡೆಗಣಿಸಿದರೆ ನೀರು ಎಂಬ ಭರಿಸಲಾಗದ ಸೀಮಿತ ಸಂಪನ್ಮೂಲವನ್ನು ನಾವು ತಪ್ಪಾಗಿ ನಿರ್ವಹಿಸುತ್ತೇವೆ. ಇದರಿಂದ ಅಪಾಯ ಕಟ್ಟಿಬುತ್ತಿ. ಆದುದರಿಂದ ನೀರನ್ನು ಅನಾವಶ್ಯಕವಾಗಿ ಪೋಲು ಮಾಡದೆ, ಹನಿ ಹನಿ ನೀರನ್ನು ಸಂರಕ್ಷಿಸುವುದು, ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

  • ಸೀತಾರಾಮ ಎಂ.ಡಿ.
    ಅಸೋಸಿಯೇಟ್ ಎನ್.ಸಿ.ಸಿ.
    ಆಫೀಸರ್
    ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.