ದೇವಚಳ್ಳ ಗ್ರಾಮದ ಗುಡ್ಡೆ – ಬಟ್ಟೆಕಜೆಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಮಠ ದಲ್ಲಿ ಗಣಪತಿ ಹವನ, ನಾಗತಂಬಿಲ,
ಮಹಾಪೂಜೆ ನಡೆದು ನಂತರ ಹರಿಸೇವೆಯು ಮಾ.22 ರಂದು ನಡೆಯಿತು. ಗಣಪತಿ ಹವನ ಮತ್ತು ನಾಗ ತಂಬಿಲವನ್ನು ಪುರೋಹಿತ ಮುರಳಿ ವಳಲಂಬೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗುಡ್ಡೆ ಕುಟುಂಬಸ್ಥರು ,ಊರವರು ಉಪಸ್ಥಿತರಿದ್ದರು.
ಸಂಜೆ ಕೆಂಚಿರಾಯ ಪೂಜೆ, ಗುರುಕಾರ್ನೂರು, ದೇವತೆ, ಕಲ್ಲುರ್ಟಿ,ಅಂಗಾರ ಬಾಕುಡ,ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಪುರುಷರಾಯ ದೈವದ ನೇಮ ನಡೆಯಲಿದೆ.
ಮಾ.23 ರಂದು ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಶ್ರೀ ನಾಗಚಾಮುಂಡಿ ನೇಮೋತ್ಸವ ನಡೆದು ಅಜ್ಜಿ-ಕೂಜಿ, ಗುಳಿಗ ದೈವದ ನೇಮ ನಡೆಯಲಿದೆ.