ಆಲೆಟ್ಟಿ ಗ್ರಾಮದ ಕುಡೆಂಬಿ ನಿವಾಸಿ ಕದಿಕಡ್ಕ ದಿ.ಕರಿಯಪ್ಪ ಗೌಡ ರವರ ಧರ್ಮ ಪತ್ನಿ ಶ್ರೀಮತಿ ಬಾಲಕ್ಕಿ ಕದಿಕಡ್ಕ ರವರು ಅಲ್ಪ ಕಾಲದ ಅಸೌಖ್ಯದಿಂದ ಮಾ.22 ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರಾದ ಯದುರಾಜ ಕದಿಕಡ್ಕ, ಕೆ.ವಿ.ಜಿ.ಪಾಲಿಟೆಕ್ನಿಕ್ ಕಾಲೇಜಿನ ಉದ್ಯೋಗಿ ಆನಂದ ಕದಿಕಡ್ಕ, ಪುತ್ರಿಯರಾದ ಶ್ರೀಮತಿ ಕುಸುಮಾವತಿ, ಶ್ರೀಮತಿ ವೇದಾವತಿ, ಶ್ರೀಮತಿ ಗಿರಿಜಾ ಹಾಗೂ ಅಳಿಯಂದಿರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಇವರು ಆಲೆಟ್ಟಿ ಮಂಡಲ ಪಂಚಾಯತ್ ನ ಕೋಲ್ಚಾರು ವಾರ್ಡಿನ ಪ್ರಥಮ ಮಹಿಳಾ ಸದಸ್ಯೆಯಾಗಿದ್ದರು.