Breaking News

ಮಾಸ್ಕ್ ಹಾಕದೇ ಅಂಗಡಿಗೆ ಬರುವವರನ್ನು ಸೇರಿಸಿಕೊಂಡರೆ ಮಾಲಕರಿಗೆ ದಂಡ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ತಹಶೀಲ್ದಾರ್ ಎಚ್ಚರಿಕೆ

ಮಾಸ್ಕ್ ಹಾಕದೇ ಅಂಗಡಿಗೆ ಯಾರೇ ಬರಲಿ ಅವರನ್ನು ಒಳಗೆ ಸೇರಿಸಿಕೊಳ್ಳಬೇಡಿ, ಮಾಸ್ಕ್ ಹಾಕಿ ಬರುವಂತೆ ಹೇಳಿ, ಹೊರಗಿನಿಂದಲೇ ಕಳುಹಿಸಿ. ಹಾಗೊಂದು ವೇಳೆ ಅಂಗಡಿಯೊಳಗೆ ಬಿಟ್ಟರೆಂದರೆ ಮಾಲಕರಿಗೆ ದಂಡ ವಿಧಿಸುತ್ತೇವೆ ಎಂದು ತಹಶೀಲ್ದಾರ್ ಅನಿತಾಲಕ್ಷ್ಮೀ ಎಚ್ಚರಿಕೆ ನೀಡಿದ್ದಾರೆ.

ಇಂದು ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಸುಳ್ಯದಲ್ಲಿ ನಡೆದ ಕೊರೋನಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು. ಹಲವರು ಗಲ್ಲಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ.

ಇದರಿಂದ ಕೊರೋನಾ ಬರುವುದಿಲ್ಲ ಎಂದು ತಿಳಿಯಬೇಡಿ, ಬಾಯಿ ಹಾಗೂ ಮೂಗು ಮುಚ್ಚುವಂತೆ ಮಾಸ್ಕ್ ಧರಿಸಿ ಈ ಮಹಾ ಮಾರಿಯನ್ನು ಹೋಗಲಾಡಿಸುವಲ್ಲಿ ತಾಲೂಕು ಆಡಳಿತದೊಂದಿಗೆ ಎಲ್ಲಾ ಸಾರ್ವಜನಿಕರು ಕೈ ಜೋಡಿಸಿ ಎಂದು ತಹಶೀಲ್ದಾರ್ ಕೇಳಿಕೊಂಡರು.


ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಲ್ ಇನ್ಸ್‌ಪೆಕ್ಟರ್ ನವೀನ್ ಚಂದ್ರ ಜೋಗಿ, ಸಿಡಿಪಿಓ ರಶ್ಮಿ, ಬಿಇಒ ಎಸ್.ಪಿ.ಮಹಾದೇವ್,, ಎಸ್.ಐ. ಹರೀಶ್ ಎಂ.ಆರ್., ನ.ಪಂ.ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಜಿ.ಪಂ. ಎಇಇ ಹನುಮಂತರಾಯಪ್ಪ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಜಾಥಾಕ್ಕೆ ಅನಿತಾಲಕ್ಷ್ಮೀಯವರು ಚಾಲನೆ ನೀಡಿದ ಬಳಿಕ ಸುಳ್ಯ ನಗರದಲ್ಲಿ ಜಾಗೃತಿ ಕಾರ್ಯ ನಡೆಯಿತು.

ಅಂಗಡಿಗಳಿಗೆ ತೆರಳಿದ ಪೊಲೀಸರು ಮಾಸ್ಕ್ ಹಾಕುವಂತೆ ಜಾಗೃತಿ ಮೂಡಿಸಿದರಲ್ಲದೆ, ಮಾಸ್ಕ್ ಹಾಕದೆ ಅಂಗಡಿಯಲ್ಲಿ ಕುಳಿತಿದ್ದ ಮಾಲಕರಿಗೆ, ಸಿಬ್ಬಂದಿಗಳಿಗೆ 100 ರೂ.ನಂತೆ ದಂಡ ಹಾಕಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.