ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಬೆಳ್ಳಾರೆ ವಲಯದ ಬಾಳಿಲ ಕಾರ್ಯಕ್ಷೇತ್ರದ ಶ್ರೀದೇವಿ ಸ್ವ ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಚೈತ್ರಾ ಅವರ ಮಗನಾದ ಆದರ್ಶನಿಗೆ ಅನಾರೋಗ್ಯವಿದ್ದ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚೇರನ್ನು ಬಾಳಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ ರವರು ವಿತರಿಸಿದರು.
ಈ ಸಂದರ್ಭ ವಲಯ ಮೇಲ್ವಿಚಾರಕ ಮುರಳೀಧರ ,ಸೇವಾ ಪ್ರತಿನಿಧಿ ಶ್ರೀಮತಿ ರತ್ನಾವತಿ ,ಸದಸ್ಯರಾದ ಶ್ರೀಮತಿ ಹರಿಣಿ ರವರು ಉಪಸ್ಥಿತರಿದ್ದರು