ಆಲೆಟ್ಟಿ ಗ್ರಾಮದ ಕೋಲ್ಚಾರು ತರವಾಡು ದೈವಸ್ಥಾನದಲ್ಲಿ ಮಾ.22 ಮತ್ತು 23 ರಂದು ಶ್ರೀ ದೈವಗಳ ಕಳಿಯಾಟ ಮಹೋತ್ಸವ ನಡೆಯಿತು. ಮಾ.22 ರಂದು ಉಗ್ರಾಣ ತುಂಬುವ ಕಾರ್ಯಕ್ರಮ ಬಳಿಕ ಶ್ರೀ ವೆಂಕಟರಮಣ ದೇವರ ಹರಿಸೇವೆಯಾಗಿ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆಯಾಯಿತು.
ಸಂಜೆ ಗುರು ಕಾರ್ನೋರಿಗೆ ಅಗೇಲು ಸೇವೆ ನಂತರ ಶ್ರೀ ದೈವದ ತೊಡಂಞಲ್ ಬಳಿಕ ಬೈನಾಟಿ ಸನ್ನಿಧಿಯಿಂದ ಕಳಶ ತಂದು ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ನಡೆಯಿತು.
ನಂತರ ಉಪದೈವಗಳಾದ ದ್ಯಾವತೆ, ಕೊಲೆಭೂತ, ಅತಿಥಿ ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ, ಪಿಲಿಭೂತ, ವರ್ಣಾರ ಪಂಜುರ್ಲಿ ದೈವಗಳ ಕೋಲ ನಡೆಯಿತು.
ಮಾ.23 ರಂದು ಬೆಳಗ್ಗೆ ಪೊಟ್ಟನ್ ದೈವ, ರಕ್ತೇಶ್ವರೀ ದೈವದ ಕೋಲ ನಡೆಯಿತು. ಬಳಿಕ ಪ್ರಸಾದ ವಿತರಣೆಯಾಗಿ, ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.