ಆಲೆಟ್ಟಿ ಗ್ರಾಮದ ನಾಗಪಟ್ಟಣ ಸಿ.ಆರ್. ಸಿ.ಕಾಲನಿ ನಿವಾಸಿ ದಿ.ಗೋಪಾಲ ರವರ ಪುತ್ರ ಮಹೇಂದ್ರ ಎಂಬವರು ಇಂದು ನಿಧನರಾದರು. ಅವರಿಗೆ ೩೫ ವರ್ಷ ವಯಸ್ಸಾಗಿತ್ತು. ಮೃತರು ಅನಾರೋಗ್ಯ ಪೀಡಿತರಾಗಿದ್ದು ಈ ಹಿಂದೆ ಮಂಗಳೂರಿನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.
ನಿನ್ನೆ ರಾತ್ರಿ ಮನೆಯಲ್ಲಿ ಮಲಗಿರುವಾಗ ಇದ್ದಕ್ಕಿದ್ದಂತೆ ರಕ್ತ ವಾಂತಿ ಮಾಡಿದರು. ವಿಷಯ ತಿಳಿದ ಸ್ಥಳೀಯ ಯುವಕರು ತಕ್ಷಣ ಅವರನ್ನು ಖಾಸಗಿ ಆಂಬ್ಯುಲೆನ್ಸ್ ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದರೂ ವಿಪರೀತ ರಕ್ತ ವಾಂತಿ ಮಾಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದು ಬಂದಿದೆ. ಮೃತರು ತಾಯಿ ಆರುವತ್ತಕುಮಾರಿ ನಾಗಪಟ್ಟಣ, ಪತ್ನಿ ದಿವ್ಯಾ, ಹಾಗೂ ಸಹೋದರಿಯರನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಸುಳ್ಯದಲ್ಲಿ ಅಟೋ ಚಾಲಕ ವೃತ್ತಿಯನ್ನು ಮಾಡುತ್ತಿದ್ದರೆನ್ನಲಾಗಿದೆ.