ಗುತ್ತಿಗಾರು ಸ.ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ಪೊಲೀಸ್ ಕೆಡೆಟ್ ನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ನೈರುತ್ಯ ರೈಲ್ವೆಯ ಗ್ರಾಹಕರ ಸಲಹಾ ಸಮಿತಿ ಸದಸ್ಯ ವೆಂಕಟ್ ದಂಬೆಕೋಡಿ ಉದ್ಘಾಟಿಸಿದರು. ಪೊಲೀಸ್ ಕೆಡೆಟ್ ನ ಉದ್ದೇಶ ಮತ್ತು ಗುರಿಯ ಬಗ್ಗೆ ಮಲ್ಲಿಕಾರ್ಜುನ ಮತ್ತು ಅನಿಲ್ ಮಾಹಿತಿ ನೀಡಿದರು.
ಉಪನ್ಯಾಸಕಿ ಜಕೀನಾ ವೇದಿಕೆಯಲ್ಲಿದ್ದರು. ಮುಖ್ಯ ಗುರುಗಳಾದ ನೆಲ್ಸನ್ ಕ್ಯಾಸ್ಟೊಲಿನೋ ಪ್ರಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಪ್ರಸನ್ನಕುಮಾರ್ ವಂದಿಸಿದರು. ದೈ.ಶಿ.ಶಿ ಗೋಪಾಲ್ ಏನೆಕಲ್ಲು ಕಾರ್ಯಕ್ರಮ ನಿರೂಪಿಸಿದರು.