ಎಡಮಂಗಲ – ಮುರುಳ್ಯ – ಎಣ್ಮೂರು ಪರಿಸರದಲ್ಲಿ ಭಾರೀ ಗಾಳಿ ಮಳೆಗೆ ಸಿಡಿಲು, ಗುಡುಗು, ಆಲಿಕಲ್ಲು ಬಿದ್ದು ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ನಿನ್ನೆ ನಡೆದಿದೆ.
ಕೇರ್ಪಡದಲ್ಲಿ ಗುರಿಯಡ್ಕ ಗಿರಿಜಾರವರ ಮನೆಯ ಮೇಲ್ಚಾವಣಿಗೆ ಹಲಸಿನ ಮರ ಬಿದ್ದು ಮನೆಯ ರೀಪು, ಪಕ್ಕಾಸು, ಹಂಚು ಪುಡಿಯಾಗಿ ಹಾನಿಯಾಗಿದೆ. ಸುಮಾರು ಹತ್ತು ಸಾವಿರದಷ್ಟು ನಷ್ಟ ಸಂಭವಿಸಿದೆ. ಎಡಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ, ಗ್ರಾಮಕರಣಿಕ ಬಸವರಾಜು, ಗ್ರಾಮ ಸಹಾಯಕ ನಾರಾಯಣ ನಾಯ್ಕ ಎಂಜೀರು, ಪಂ. ಸದಸ್ಯೆ ಶ್ರೀಮತಿ ರೇವತಿ ರಘುನಾಥ ಎಂಜೀರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.