ಬಳ್ಪ  ಗ್ರಾ.ಪಂ.ನಲ್ಲಿ ವಿಶೇಷ ಗ್ರಾಮಸಭೆ

Advt_Headding_Middle
Advt_Headding_Middle

ಜಲ್ ಜೀವನ್ ಮಿಷನ್ (ಮನೆ ಮನೆಗೆ ಗಂಗೆ) ಸ್ವಚ್ಛ ಭಾರತ್ ಮಿಷನ್, ಜಿ.ಪಂ. ದ.ಕ. ಜಿಲ್ಲೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸಮುದಾಯ ಸಂಸ್ಥೆ ತುಮಕೂರು ಇದರ ಸಹಯೋಗದೊಂದಿಗೆ ಬಳ್ಪ ಗ್ರಾ.ಪಂ.ನಲ್ಲಿ ಜಲಜೀವನ್ ಮಿಷಾನ್ ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು ವಿಶೇಷ ಗ್ರಾಮ ಸಭೆಯು ಮಾ. 25ರಂದು ಗ್ರಾ.ಪಂ‌. ಸಭಾಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕುಸುಮ ಎಸ್.ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸುಬ್ರಹ್ಮಣ್ಯ ಕ್ಷೇತ್ರದ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಗ್ರಾ.ಪಂ. ಸದಸ್ಯರುಗಳಾದ ನೇತ್ರಾವತಿ ಹೊಪ್ಪಾಳೆ, ಪ್ರಶಾಂತ್ ಪೊಟ್ಟುಕೆರೆ, ಹರ್ಷಿತ್ ಕಾರ್ಜ, ಶೈಲಜಾ ಎಣ್ಣೆಮಜಲು, ರಾಜೀವ ಕಣ್ಕಲ್, ದಿವಾಕರ ಎಣ್ಣೆಮಜಲು, ಸುನಿತಾ ಸಂಪ್ಯಾಡಿ, ಶಶಿಕಲಾ ಸೂಂತಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಗಂಗಯ್ಯ ಮಲೆಕುಡಿಯ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಜಲಜೀವನ್ ಮಿಷಾನ್ ಅಧಿಕಾರಿಗಳು ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಕುರಿತು ಮಾಹಿತಿ ನೀಡಿದರು. ಮಾಜಿ ಸದಸ್ಯ ವಿನೋದ್ ಬೊಳ್ಮಲೆಯವರು ಮಾತನಾಡಿ ಪ್ರಕೃತಿದತ್ತವಾಗಿ ಕಾಡಿನಿಂದ ಬರುವ ನೀರನ್ನು ಗೃಹಬಳಕೆಗೆ ಉಪಯೋಗಿಸುವ ಬಗ್ಗೆ ಅನುಮತಿ ನೀಡಿದರೆ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ದೃಷ್ಟಿಯಿಂದ ಕೊಳವೆ ಬಾವಿ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿರುವುದು ದುರಂತ. ಎಲ್ಲರಿಗೂ ನೀರು ಸಿಗಬೇಕಾದರೆ ಎಲ್ಲರೂ ಸಹಕಾರ ನೀಡಬೇಕು.
ಎಂದರು. ಸರಕಾರದಿಂದ ಪಂಚಾಯತ್ ಮೂಲಕ ಮಿತದರದಲ್ಲಿ ಸಿಗುವ ನೀರನ್ನು ಉಪಯೋಗಿಸಿ ನೀರಿನ ಕರ ಪಾವತಿಸದೇ ಇರುವುದು ಸರಿಯಲ್ಲ. ಸರಕಾರಕ್ಕೆ ಪಾವತಿಸಬೇಕಾದ ಮೂಲಭೂತ ಸೌಕರ್ಯಗಳ ತೆರಿಗೆಯನ್ನು ಪಾವತಿಸದೆ ಸೌಲಭ್ಯಗಳನ್ನು ಪಡೆಯುವ ಯೋಗ್ಯತೆ ಇರುವುದಿಲ್ಲವೆಂದು ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಹೇಳಿದರು. ಹರೀಶ್ ಕಲುಂಗುಡಿ, ಬೀದಿಗುಡ್ಡೆ, ಮಾತನಾಡಿ ಸರಕಾರದ ಕೊಳವೆಬಾವಿಗಿಂತ ಕನಿಷ್ಠ 500 ಮೀ. ಅಂತರದಲ್ಲಿ ಖಾಸಗಿ ಕೊಳವೆಬಾವಿ ನಿರ್ಮಿಸದಂತೆ ಕಾನೂನು ಇದ್ದರೂ ಅದರ ಪಾಲನೆಯಾಗುತ್ತದೆಯೇ ಎಂದು ಪ್ರಶ್ನಿಸಿದರಲ್ಲದೆ ನಮ್ಮ ಸಂಪ್ಯಾಡಿ ಭಾಗದಲ್ಲಿ ಕುಡಿಯುವ ನೀರು ಒದಗಿಸುವಲ್ಲಿ ನಾನು ಪೂರ್ಣ ಸಹಕಾರ ನೀಡುತ್ತೇನೆ ಎಂದರು.

ಸರಕಾರದ ಆದೇಶವನ್ನು ಮೀರಿ  ಕೊಳವೆ ಬಾವಿ ಕೊರೆದರೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಸಮಸ್ಯೆ ಎದುರಾಗುತ್ತದೆ ಎಂದು ಕಾರ್ಯದರ್ಶಿ ಗಂಗಯ್ಯ ಮಲೆಕುಡಿಯ ಹೇಳಿದರು. ಸಭಾಕಾರ್ಯಕ್ರಮದ ಬಳಿಕ ಸ್ವ ಸಹಾಯ ಸಂಘಗಳ ಜಾಥಾ ನಡೆಯಿತು. ಪಂಚಾಯತ್ ಕಾರ್ಯದರ್ಶಿ ಗಂಗಯ್ಯ ಮಲೆಕುಡಿಯ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.