ಐವರ್ನಾಡು ಗ್ರಾಮದ ಮಡ್ತಿಲ ಕುಟುಂಬದ ರುದ್ರಚಾಮುಂಡಿ, ಶಿರಾಡಿದೈವ ಹಾಗೂ ಪರಿವಾರ ದೈವಗಳ ಧರ್ಮ ನಡಾವಳಿಯು ಮಾ.25 ಮತ್ತು ಮಾ.26 ರಂದು ನಡೆಯಿತು.
ಮಾ.25 ರಂದು ಪೂರ್ವಾಹ್ನ ಆದಿ ಮನೆಯಲ್ಲಿ ಗಣಹೋಮ, ಮಣೆಪೂಜೆ ನಡೆಯಿತು.
ರಾತ್ರಿ ಶ್ರೀ ದೈವಗಳ ಭಂಡಾರ ತೆಗೆಯಲಾಯಿತು.
ರಾತ್ರಿ ಗಂಟೆ 9.00 ರಿಂದ ಸತ್ಯಜಾವತೆ, ಪಾಷಾಣಮೂರ್ತಿ ನೇಮ ನಡೆಯಿತು.
ಪ್ರಾತ: ಕಾಲ ಧರ್ಮದೈವ ರುದ್ರಚಾಮುಂಡಿ ಮತ್ತು ಶಿರಾಡಿ ದೈವಗಳ ನೇಮ ನಡೆಯಿತು.
ಮಾ.26 ರಂದು ಶುಕ್ರವಾರ ಪೂರ್ವಾಹ್ನ ಶ್ರೀ ದೈವಗಳ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಮಡ್ತಿಲ ಕುಟುಂಬದ ಆಡಳಿತದಾರರಾದ ಎಂ.ಬೆಳ್ಯಪ್ಪ ಗೌಡ ಮಡ್ತಿಲ, ಕಾರ್ಯನಿರ್ವಾಹಕ ದಿನೇಶ್ ಮಡ್ತಿಲ, ಮಡ್ತಿಲ ಮೋಹನ ಗೌಡ ಕೊಲ್ಲಮೊಗ್ರ, ವೀರಪ್ಪ ಗೌಡ ಹೊಸಮನೆ, ಎಂ.ಎಸ್.ಮೋನಪ್ಪ ಗೌಡ ಮಡ್ತಿಲ, ಎಂ.ಎಸ್.ಬೆಳ್ಯಪ್ಪ ಗೌಡ, ಕೃಷ್ಣಪ್ರಸಾದ್ ಮಡ್ತಿಲ, ಮಡ್ತಿಲ ಬಾಲಕೃಷ್ಣ ನಿವೃತ್ತ ಫಾರೆಸ್ಟರ್, ಬಿ.ದುಗ್ಗಪ್ಪ ಗೌಡ ಬಜಂತಡ್ಕ, ಎಂ.ಚಿನ್ನಪ್ಪ ಮಡ್ತಿಲ, ಕರುಣಾಕರ ಮಡ್ತಿಲ, ಸತೀಶ ಮಡ್ತಿಲ ಮತ್ತು ಮಡ್ತಿಲ,ದೊಡ್ಡಮನೆ, ಬಜಂತಡ್ಕ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರ್ಣಾರ ಪಂಜುರ್ಲಿ,ಕುಪ್ಪೆ ಪಂಜುರ್ಲಿ ದೈವಗಳ ನೇಮ ನಡೆಯಲಿದೆ.
ಪೂರ್ವಾಹ್ನ ಗಂಟೆ 11.30 ರಿಂದ ಅಂಗಾರ ಬಾಕುಡ, ಪೊಟ್ಟ ಭೂತ ನೇಮ ನಡೆಯಲಿದೆ.
ಮಧ್ಯಾಹ್ನ ಗಂಟೆ 1.00 ರಿಂದ ಅನ್ನಸಂತರ್ಪಣೆ ನಡೆಯಲಿದೆ.