ಸಂಪಾಜೆ ಗ್ರಾಮ ಪಂಚಾಯತ್ : ಸಾಮಾನ್ಯ ಸಭೆ

Advt_Headding_Middle
Advt_Headding_Middle

ಸಂಪಾಜೆ ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷರಾದ ಜಿ.ಕೆ. ಹಮೀದ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿ’ಸೋಜಾ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿ, ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿ ಓದಿದರು.
ಕಳೆದ ಸಭೆಯ ನಿರ್ಣಯವನ್ನು ಒದಲಾಗಿ ಪೇಟೆಯಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವ ಸಂಚಾರಿ ವಾಹನದಿಂದ ಸಾರ್ವಜನಿಕರಿಂದ ದೂರು ಬರುತ್ತಿದ್ದು ತಕ್ಷಣ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು.
ಕಡೆಪಾಲ, ಸುಳ್ಯಕೊಡಿ ಬಳಿ ಕೋಳಿ ತ್ಯಾಜ್ಯ ಹಾಕಿ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ತೊಂದರೆಗಳು ಉಂಟಾಗದಂತೆ ಎಚ್ಚರವಹಿಸಿ ಸ್ವಚ್ಚತೆಗೆ ಆದ್ಯತೆ ,ತೆರಿಗೆ ವಸೂಲಿ ಕಡಿಮೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ, ಪೇಟೆಯಲ್ಲಿ ಕಸ ಹಾಕುವವರರ ಮೇಲೆ ಕ್ರಮ, ಗ್ರಾಮದ ಬೀದಿ ದೀಪಗಳ ಬಗ್ಗೆ ದುರಸ್ತಿ, ಕೊರೊನ ಬಗ್ಗೆ ಜನ ಜಾಗೃತಿ, ತೆರಿಗೆ ಪರಿಸ್ಕರಣೆ , ಸಾರ್ವಜನಿಕ ಅರ್ಜಿಗಳಿಗೆ ಸ್ವೀಕೃತಿ, ಸ್ಪಂದನೆ ಮೊದಲಾದ ವಿಚಾರದಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸ, ಸೋಮಶೇಖರ್ ಕೊಯಿಂಗಾಜೆ, ಸುಮತಿ, ಸುಂದರಿ ಮುಂಡಡ್ಕ, ವಿಮಲ, ಅಬೂಸಾಲಿ, ಸವಾದ್, ಅನುಪಮ ವಿಜಯ, ಜಗದೀಶ್ ರೈ, ಎಸ್. ಕೆ .ಹನೀಫ್, ಸುಶೀಲಾ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.