ಗುತ್ತಿಗಾರು ಗ್ರಾ.ಪಂ ನಲ್ಲಿ ಮಾ.26 ರಂದು ಸಾಮಾನ್ಯ ಸಭೆಯು ಗ್ರಾ.ಪಂ ಅದ್ಯಕ್ಷೇ ರೇವತಿ ಆಚಳ್ಳಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಗ್ರಾ.ಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಂ ಪ್ರಸಾದ್ ರವರು ವರದಿ ,ಲೆಕ್ಕ ಪತ್ರ ಮಂಡಿಸಿ ಸರಕಾರದ ಸುತ್ತೋಲೆ ,ಸಾರ್ವಜನಿಕ ಅರ್ಜಿಗಳನ್ನು ಗಳನ್ನು ಓದಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಪ್ರಮೀಳಾ ಭಾಸ್ಕರ ,ಸದಸ್ಯರುಗಳಾದ ವೆಂಕಟ್ ವಳಲಂಬೆ ,ಮಾಯಿಲಪ್ಪ ಕೊಂಬೊಟ್ಟು ,ಜಗದೀಶ ಬಾಕಿಲ ,ವಿನಯಚಂದ್ರ ಸಾಲ್ತಾಡಿ ,ಭರತ್ ಕೆ ವಿ,ಲತಾಕುಮಾರಿ ,ಎಂ.ಕೆ ಶಾರದಾ ,ಮಂಜುಳಾ ಮುತ್ಲಾಜೆ ,ಸುಮಿತ್ರಾ ಮೂಕಮಲೆ ,ಲೀಲಾವತಿ ಅಂಜೇರಿ ,ಅನಿತಾ ಮೆಟ್ಟಿನಡ್ಕ,ಭಾರತಿ ಕೆ ಎಸ್ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.