ಅರಂತೋಡು ಗ್ರಾಮದ ದೇರಾಜೆ ತರವಾಡು ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ದೈವಗಳ ಧರ್ಮ ನಡಾವಳಿಯು ಮಾ.25ರಂದು ನಡೆಯಿತು.ಮಾ.೨4 ರಂದು ಶ್ರೀ ಉಳ್ಳಾಕುಲು ದೈವದ ಭಂಡಾರ ತೆಗೆದು,ಮರುದಿನ ಬೆಳಗ್ಗೆ ಶ್ರೀ ದೈವಗಳ ನಡಾವಳಿಯು ನಡೆಯಿತು.
ಅಡ್ಡಂತಾಯ,ಕೂಜಿ ದೈವ ಹಾಗೂ ಉಪದೈವಗಳ ಕೋಲವು ನಡೆಯಿತು.ನಡಾವಳಿಯಲ್ಲಿ ದೇರಾಜೆ ಗುಂಡ್ಲದ ಕುಟುಂಬಸ್ಥರು,ಬಂಧುಗಳು ಪಾಲ್ಗೊಂಡಿದ್ದರು. ಊರ ಹಾಗೂ ಪರ ಊರ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಸದ್ರಿ ದಿನಗಳಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆಯು ವಿತರಣೆಯಾಯಿತು.