ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೧೯-೨೦೨೦ ನೇ ಸಾಲಿನ ಪ್ರತಿಭಾವಂತ ಮಕ್ಕಳಿಗೆ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮ ಮಾ.೨೦ ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಾಗಪ್ಪ ಗೌಡ ಪಾಲೆಪ್ಪಾಡಿ ವಹಿಸಿದ್ದರು.ವೇದಿಕೆಯಲ್ಲಿ ದತ್ತನಿಧಿ ಸ್ಥಾಪಕರಾದ ಬಿ.ಕೆ.ಶಶಿಧರ,ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ಧನ ನೀಡಿ ಸಹಕರಿಸುತ್ತಿರುವ ಧರ್ಮಪಾಲ ಲಾವಂತಡ್ಕ,ಗ್ರಾ.ಪಂ ಸದಸ್ಯೆ ಶ್ರೀಮತಿ ಮಮತಾ ಉದ್ದಂಪಾಡಿ,ಮುಖ್ಯೋಪಾಧ್ಯಾಯಿನಿ ಹೇಮಾವತಿ ಉಪಸ್ಥಿತರಿದ್ದರು.
ದಿ.ಐತಪ್ಪ ಗೌಡ ಪಲ್ಲತ್ತಡ್ಕ,ಕಳಂಜ ವಿಶ್ವನಾಥ ರೈ,ಶಶಿಧರ ನಿಡುಬೆ,ದಿ.ಪುರುಷೋತ್ತಮ ಮಡ್ತಿಲ,ಶ್ರೀಮತಿ ಎಂ.ಪಿ.ಶಿವಮ್ಮ ಮಡ್ತಿಲ,ಇವರುಗಳು ಸ್ಥಾಪಿಸಿದ ದತ್ತನಿಧಿಯ ಪುರಸ್ಕಾರವನ್ನು1 ರಿಂದ 7 ತರಗತಿಯ ಪ್ರತಿಭಾವಂತ ಮಕ್ಕಳಿಗೆ ನಿಯಮಾನುಸಾರ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಪಂಚಾಯಿತ ಉಳಿತಾಯ ಖಾತೆಯಲ್ಲಿ ಹಣ ತೊಡಗಿಸಿ ಅತೀ ಹೆಚ್ಚು ಬಡ್ಡಿ ಪಡೆದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು,೨೦೧೯- ೨೦೨೦ ನೇ ಸಾಲಿನಲ್ಲಿ ಜಿಲ್ಲಾ ಹಂತದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಮಕ್ಕಳಿಗೆ ಧರ್ಮಪಾಲ ಲಾವಂತಡ್ಕ ಇವರು ನಗದು ಬಹುಮಾನ ನೀಡಿ ಗೌರವಿಸಿದರು.ಪುರಸ್ಕಾರ ಪಡೆದ ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು,ವೇದಿಕೆಯಲ್ಲಿ ಆಸೀನರಾದ ಗಣ್ಯರು ತಮ್ಮ ಮಾತಿನ ಮೂಲಕ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಪ್ರೊತ್ಸಾಹಿಸಿದರು,ವರ್ಷದಲ್ಲಿ ಒಟ್ಟು ೧೩,೭೦೦ ರೂಪಾಯಿ ಬಡ್ಡಿಯನ್ನು ಮಕ್ಕಳಿಗೆ ವಿತರಿಸಲಾಯಿತು.
ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯಿನಿಯಾದಂತಹ ಶ್ರೀಮತಿ ಹೇಮಾವತಿ ವಹಿಸಿದ್ದರು,ಶ್ರೀಮತಿ ಸರಸ್ವತಿ ಎಲ್ಲರನ್ನೂ ವಂದಿಸಿದರು,ಶ್ರೀಮತಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು,ಶ್ರೀಮತಿ ಹರಿಣಾಕ್ಷಿ,ಶ್ರೀಮತಿ ರತ್ನಾವತಿ ದೇರಾಜೆ,ಶ್ರೀಮತಿ ಮಾಲತಿ,ಶ್ರೀಮತಿ ಜ್ಯೋತಿ ಇವರೆಲ್ಲರೂ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.