ಬೆಳ್ಳಾರೆಯಲ್ಲಿ ಕಾಮತ್ ಮೆಡಿಕಲ್ಸ್ ಉದ್ಘಾಟನೆ

Advt_Headding_Middle
Advt_Headding_Middle

 

ಉತ್ತಮ ಸರ್ವಿಸ್ ಮುಖಾಂತರ ಅಭಿವೃದ್ಧಿ: ಸತೀಶ್ಚಂದ್ರ ಎಸ್.ಆರ್

ಉಚಿತ ನೇತ್ರ, ಚರ್ಮರೋಗ ಚಿಕಿತ್ಸಾ ಶಿಬಿರ

ಬೆಳ್ಳಾರೆಯ ಕಲ್ಪವೃಕ್ಷ ಆರ್ಕೇಡ್ ನಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ ಕಾಮತ್ ಮತ್ತು ಶ್ರೀಮತಿ ಸರಸ್ವತಿ ಕಾಮತ್ ರವರ ಮಾಲಕತ್ವದ ಕಾಮತ್ ಮೆಡಿಕಲ್ಸ್ ಮಾ.27 ರಂದು ಶುಭಾರಂಭಗೊಂಡಿತು.
ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್.ರವರು ದೀಪ ಬೆಳಗಿಸಿ ಮೆಡಿಕಲ್ ಶಾಪ್ ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು.
ಡಾ.ಜಯರಾಮ ರೈ ರಿಬ್ಬನ್ ಕತ್ತರಿಸಿ ಮೆಡಿಕಲ್ ಶಾಪನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಕಾಮಧೇನು ಗ್ರೂಪ್ಸ್ ಮಾಲಕ ಎಂ.ಮಾಧವ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣ ವಿನಯಚಂದ್ರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ರಾಜೀವಿ ಆರ್.ರೈ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ನ್ಯಾಯವಾದಿ ಎಂ.ವೆಂಕಪ್ಪ ಗೌಡ, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಬೆಳ್ಳಾರೆ ಪ್ರಾಥಮಿಕ ಕೃ.ಪ.ಸ.ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು, ಬೆಳ್ಳಾರೆ ಪೊಲೀಸ್ ಠಾಣೆ ಉಪನಿರೀಕ್ಷಕ ಆಂಜನೇಯ ರೆಡ್ಡಿ, ಅಡಿಕೆ ವ್ಯಾಪಾರಸ್ಥ ಮಂಜಪ್ಪ ರೈ, ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಬೂಬಕ್ಕರ್ ,ಕರಾವಳಿ ಟ್ರೇಡರ್ಸ್ ನ ಹಾಜಿ ಮಮ್ಮಾಲಿ, ಡಾ.ಜನಾರ್ದನ ಕಾಮತ್, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ, ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ ಅಜ್ರಂಗಳ, ಬೆಳ್ಳಾರೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ಶಕುಂತಳಾ ನಾಗರಾಜ್, ಕಳಂಜ ಪ್ರಾ.ಕೃ.ಪ.ಸ
ಸಂಘದ ಅಧ್ಯಕ್ಷ ಕೂಸಪ್ಪ ಗೌಡ, ಡಾ.ಶಶಿಧರ ಪಡಿಲ್ ,ಡಾ.ಪವನ ಕಾಮತ್ ನಾರಾಯಣ ಕಾಮತ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಚಂದ್ರಶೇಖರ ಕಾಮತ್ ಸ್ವಾಗತಿಸಿ, ಶ್ರೀಮತಿ ಸರಸ್ವತಿ ಕಾಮತ್ ವಂದಿಸಿದರು.
ಜ್ಞಾನ ದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಮೇಘನಾ ಪ್ರಾರ್ಥಿಸಿದರು.
ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.

ಉಚಿತ ನೇತ್ರ, ಚರ್ಮರೋಗ ಚಿಕಿತ್ಸಾ ಶಿಬಿರ

ವಾಣಿಜ್ಯ ವರ್ತಕ ಕೈಗಾರಿಕಾ ಸಂಘ ಬೆಳ್ಳಾರೆ,ಕಾಮಧೇನು ಮಲ್ಟಿಪರ್ಪಸ್ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ, ಕಾಮತ್ ಮೆಡಿಕಲ್ ಗ್ರೂಪ್ ಬೆಳ್ಳಾರೆ, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಸಾರ್ವಜನಿಕ ಸರಕಾರಿ ಆಸ್ಪತ್ರೆ ಸುಳ್ಯ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಸುಳ್ಯ, ಆಪ್ಟಿಕಲ್ ಲ್ಯಾಂಡ್ ,ಅಮ್ಮು ರೈ ಕಾಂಪ್ಲೆಕ್ಸ್ ಬೆಳ್ಳಾರೆ ಇದರ ಸಹಯೋಗದಲ್ಲಿ ಉಚಿತ ನೇತ್ರ ಮತ್ತು ಚರ್ಮ ರೋಗ ಚಿಕಿತ್ಸಾ ಶಿಬಿರವು ನಡೆಯಿತು.
ಉಚಿತ ಕಣ್ಣಿನ ಪರೀಕ್ಷೆ ಮತ್ತು ಸಲಹೆ,ಉಚಿತ ಕಣ್ಣಿನ ಪೊರೆ ಆಪರೇಶನ್, ಉಚಿತ ಪ್ರಯಾಣ, ವಸತಿ, ಊಟ,ಮತ್ತು ಉಪಹಾರ ಹಾಗೂ ಉಚಿತ ಕನ್ನಡಕ ವಿತರಿಸಲಾಯಿತು.
ಉಚಿತ ಚರ್ಮ ರೋಗ ತಪಾಸಣೆ,ಚಿಕಿತ್ಸೆ ಮತ್ತು ಸಲಹೆ ನೀಡಲಾಯಿತು.
ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು ,ಮಂಗಳೂರಿನ ಖ್ಯಾತ ಜಿಲ್ಲಾ ಆಸ್ಪತ್ರೆ ,ಸಂಚಾರಿ ನೇತ್ರ ಘಟಕ, ತಾಲೂಕು ಸಾರ್ವಜನಿಕ ಆಸ್ಪತ್ರೆ ಸುಳ್ಯ ಇದರ ಪ್ರಸಿದ್ಧ ನೇತ್ರ ತಜ್ಞರು ಭಾಗವಹಿಸಿದ್ದರು.
ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಇವರ ವತಿಯಿಂದ ಉಚಿತ ಲಭ್ಯ ಕನ್ನಡಕಗಳನ್ನು ವಿತರಿಸಲಾಯಿತು.
ನೂರಾರು ಜನರು ಸದುಪಯೋಗಪಡಿಸಿಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.