ಎಣ್ಮೂರು ಗ್ರಾಮದ ಹೇಮಳ ಶ್ರೀ ಕ್ಷೇತ್ರ ಕೆಮ್ಮಲೆಯಲ್ಲಿ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ,ಕೆಮ್ಮಲೆ ಬ್ರಹ್ಮರ ಮೂಲಸ್ಥಾನ ಹಾಗೂ ಉಳ್ಳಾಕುಲು,ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ಮಹಾಪೂಜೆ ಹಾಗೂ ಸಾಮೂಹಿಕ ನಾಗತಂಬಿಲ ಸೇವೆ ಮಾ.27ರಂದು ನಡೆಯಿತು. ನೂರಾರು ಭಕ್ತಾಧಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಬೆಳಿಗ್ಗೆ ಗಣಹೋಮ,ಕಲಶಪೂಜೆ,ಶ್ರೀ ಪಂಚಾಮೃತ ಅಭಿಷೇಕ, ಕಲಶಾಭಿಷೇಕ,ಬ್ರಹ್ಮರ ಮೂಲಸ್ಥಾನದಲ್ಲಿ ಪೂಜೆ,ನಾಗಪೂಜೆ ಮತ್ತು ಸಾಮೂಹಿಕ ನಾಗತಂಬಿಲ ಸೇವೆ,ಶ್ರೀ ನಾಗಬ್ರಹ್ಮ ದೇವರ ಮಹಾಪೂಜೆ,ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.ವೇದಮೂರ್ತಿ ಸುಬ್ರಹ್ಮಣ್ಯ ಉಪಾಧ್ಯಾಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.
ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಯಾನಂದ ಕೆ., ಕಾರ್ಯದರ್ಶಿ ಜಯರಾಮ ಐಪಳ,ಆಡಳಿತ ಮಂಡಳಿ ಸದಸ್ಯರುಗಳಾದ ಬಾಲಕೃಷ್ಣ ಕೆ,ಹೊನ್ನಪ್ಪ ಐಪಳ,ಗಂಗಾಧರ ಹೇಮಳ,ನಾರಾಯಣ ಕೋರ್ಜೆ,ಗಣೇಶ ಅನ್ಯಡ್ಕ,ಗೋಪಾಲಕೃಷ್ಣ ಐಪಳ,ವಸಂತ ಕೆ.,ಕೃಷ್ಣ ಕುಮಾರ್,ಶೇಷಪ್ಪ ಗೌಡ,ಜನಾರ್ದನ ಎ,ದಿನೇಶ್ ಹೆಚ್ .ಹಾಗೂ ಊರ,ಪರವೂರ ಭಕ್ತರು ಆಗಮಿಸಿದ್ದರು.