ಬೆಳ್ಳಾರೆ ಪತಂಜಲಿ ಯೋಗ ಕೇಂದ್ರದ ದಶಸಂಭ್ರಮ ಕಾರ್ಯಕ್ರಮ ಮಾ.28ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕರ್ನಾಟಕ ಪತಂಜಲಿ ಯೋಗ ಸಮಿತಿ ಪ್ರಭಾರಿ ಯೋಗಾಚಾರ್ಯ ಭವರ್ ಲಾಲ್ ಆರ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಹ ಪ್ರಭಾರಿ ಡಾ. ಜ್ಞಾನೇಶ್ವರ್ ಜಿ, ದ.ಕ. ಜಿಲ್ಲಾ ಪ್ರಭಾರಿ ರಾಘವೇಂದ್ರಜಿ, ತಾಲೂಕು ಪ್ರಭಾರಿ ಹೊನ್ನಪ್ಪ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಸಾನ್ವಿ ಪಿ. ರೈ ಪ್ರಾರ್ಥಿಸಿದರು. ಬೆಳ್ಳಾರೆ ಯೋಗ ಕೇಂದ್ರದ ಶಿಕ್ಷಕ ಜನಾರ್ಧನ ಬೆಳ್ಳಾರೆ ಸ್ವಾಗತಿಸಿದರು. ಯೋಗ ಶಿಕ್ಷಕ ಪ್ರಸಾದ್ ಸೇವಿತ ಕಾರ್ಯಕ್ರಮ ನಿರೂಪಿಸಿದರು. ಯೋಗ ಶಿಕ್ಷಕಿ ಶ್ರೀಮತಿ ಸರಸ್ವತಿ ವರದಿ ವಾಚಿಸಿದರು.