ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಎಂಬಲ್ಲಿ ಶ್ರೀ ದುರ್ಗಾಪರಮೇಶ್ವರಿ ಜ್ಞಾನವಿಕಾಸ ಕೇಂದ್ರದ ಸಭೆ ಶಾಲೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಚಂದ್ರಾವತಿ ಗುಂಡಡ್ಕ ವಹಿಸಿದ್ದರು. ನೆನಪಿನ ಶಕ್ತಿ ಸ್ಪರ್ಧೆಯನ್ನು ನಡೆಸಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಮೃತೇಶ್ವರಿ ಸಂಘದವರು ನಡೆಸಿಕೊಟ್ಟರು. ಗುತ್ತಿಗಾರು ವಲಯ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆ ಭಾಗವಹಿಸಿ ಜೀವನ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.ಸೇವಾಪ್ರತಿನಿಧಿ ಅಶ್ವಿನಿ, ಒಕ್ಕೂಟ ಅಧ್ಯಕ್ಷರು ಜಯಂತಿ, ಕಾರ್ಯದರ್ಶಿ ಮಾಲತಿ ಮತ್ತು ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.