ಕೊಡಿಯಾಲ ಗ್ರಾಮದ ಆರ್ವಾರ ಮನೆಯಲ್ಲಿ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಮಾ.27.ಮತ್ತು ಮಾ.28 ರಂದು ನಡೆಯಿತು.
ಮಾ.27 ರಂದು ಬೆಳಿಗ್ಗೆ ಗಣಪತಿ ಹೋಮ, ನಾಗ ತಂಬಿಲ, ಸತ್ಯನಾರಾಯಣ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು.
ಸಂಜೆ ಗಂಟೆ 6.00 ಕ್ಕೆ ದೈವಗಳ ಭಂಡಾರ ತೆಗೆದು ಜಾವತೆ, ಕಲ್ಲುರ್ಟಿ , ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ,ಗುಳಿಗ ದೈವಗಳ ನೇಮೋತ್ಸವ ನಡೆಯಿತು.
ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಮಾ.28 ರಂದು ಬೆಳಿಗ್ಗೆ ಧೂಮಾವತಿ ದೈವದ ನೇಮೋತ್ಸವ ನಡೆಯಿತು.
ಮಧ್ಯಾಹ್ನ ಗಂಟೆ 12.00 ರಿಂದ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ
ಆರ್ವಾರ ಪದ್ಮಯ್ಯ ಗೌಡ,ಆರ್ವಾರ ಬಾಬು ಗೌಡ,ಆರ್ವಾರ ನಾರಾಯಣ ಗೌಡ, ಆರ್ವಾರ ತಿಮ್ಮಪ್ಪ ಗೌಡ, ಆರ್ವಾರ ದೇರಣ್ಣ ಗೌಡ ಮತ್ತು ಮನೆಯವರು ಹಾಗೂ ಕುಟುಂಬಸ್ಥರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.