ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಒತ್ತೆಕೋಲ ನಡೆಯಿತು. ನಿನ್ನೆ ಬೆಳಿಗ್ಗೆ ಗಣಹೋಮ ನಡೆದು, ಕೊಳ್ಳಿ ಕೂಡುವ ಕಾರ್ಯಕ್ರಮ ನಡೆಯಿತು.
ರಾತ್ರಿ ಭಂಡಾರ ಒತ್ತೆಕೋಲ ಗದ್ದೆಗೆ ಭಂಡಾರ ಬಂದು, ಮೇಲೇರಿಗೆ ಅಗ್ನಿಸ್ಪರ್ಶ ನಡೆಯಿತು. ನಂತರ ರಾತ್ರಿ ಕುಳ್ಚಾಟ ನಡೆಯಿತು.
ಇಂದು ಮುಂಜಾನೆ ದೈವದ ಅಗ್ನಿಪ್ರವೇಶ ನಡೆಯಿತು. ಆಡಳಿತ ಮಂಡಳಿಯವರು ಊರ, ಪರವೂರ ಭಕ್ತಾದಿಗಳು ಉಪಸ್ಥಿತರಿದ್ದು, ದೈವದ ಪ್ರಸಾದ ಸ್ವೀಕರಿಸಿದರು.