ಕೇರಳ ವಿಧಾನಸಭೆಗೆ ಎ.6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಸಚಿವ ಎಸ್. ಅಂಗಾರ ಅವರು ಮಾ.29ರಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಅವರು ಸ್ಪರ್ಧಿಸಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಣ್ಮಕಜೆ ಗ್ರಾ.ಪಂ.ನ ಕೊಡೆಂಕಿರಿ ಕಾಲನಿ, ಬದಿಯಾರ್ , ಕಜಂಪಾಡಿ, ಕೊಂಬರಬೆಟ್ಟು, ಬಾಳೆಮೂಲೆ, ನಲ್ಕ, ನಾವುದ ಮೂಲೆ, ಪುತ್ತಿಗೆ ಗ್ರಾಮ ಪಂಚಾಯತಿಯ ಮುಂಡಿತಡ್ಕ, ಸಜಂಕಿಲ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿದರು.