ಸುಳ್ಯ ಗಾಂಧಿನಗರ ಪೆಟ್ರೋಲ್ ಬಂಕ್ ನಲ್ಲಿ ಪಾರ್ಕ್ ಮಾಡಿದ ಬೈಕಿನಲ್ಲಿರಿಸಿದ ಹೆಲ್ಮೆಟ್ ನ್ನು ಎಗರಿಸುವ ದೃಶ್ಯ ಸಿಸಿ ಟಿವಿ ಯಲ್ಲಿ ಕಂಡು ಬಂದಿದೆ. ಪೆಟ್ರೋಲ್ ಬಂಕ್ ಸಿಬ್ಬಂದಿ ಬೈಕಿನಲ್ಲಿ ಹೆಲ್ಮೆಟ್ ಇಟ್ಟು ಹೋಗಿದ್ದು ರಾತ್ರಿ ಮನೆಗೆ ಹೋಗಲು ಹೊರಡುವಾಗ ಹೆಲ್ಮೆಟ್ ಇರಲಿಲ್ಲ. ಮರುದಿನ ಸಿಸಿ ಟಿವಿ ಪರಿಶೀಲಿಸಿದಾಗ ಹೆಲ್ಮೆಟ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.