ಸುಮಾರು ಮೂರು ವರ್ಷಗಳ ಹಿಂದೆ ಆರಂಭಗೊಂಡ ಸುಳ್ಯ ಉಬರಡ್ಕ ರಸ್ತೆ ಅಗಲೀಕರಣ ಮತ್ತು ಡಾಮರೀಕರಣ ಕಾಮಗಾರಿ ಕಳೆದ ವರ್ಷದಿಂದ ಸ್ಥಗಿತಗೊಂಡಿತ್ತು. ಗ್ರಾಮಸ್ಥರು ಹಾಗೂ ಗ್ರಾಮದ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಪ್ರತಿಭಟನೆ ನಡೆಸಿ ಇಲಾಖೆ ಹಾಗೂ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿದ ಪರಿಣಾಮ ಇದೀಗ ಗುತ್ತಿಗೆದಾರರಾದ ಬಿ.ಕೆ.ಕನ್ಸ್ಟ್ರಕ್ಷನ್ ಕುಂದಾಪುರ ಇದರ ಅಶೋಕ್ ಭಂಡಾರಿ ಅವರ ಕಡೆಯಿಂದ ಪಿ.ಡಬ್ಲ್ಯೂ. ಡಿ ಅಭಿಯಂತರರಾದ ಸಣ್ಣೇಗೌಡರ ಉಪಸ್ಥಿತಿಯಲ್ಲಿ ಆರಂಭಗೊಂಡಿದೆ.