ಉಳುವಾರು ತಳಮನೆಯ ಕುಟುಂಬದ ಧರ್ಮದೈವಗಳ ನಡಾವಳಿ

Advt_Headding_Middle
Advt_Headding_Middle

ಅರಂತೋಡು ಗ್ರಾಮದ ಉಳುವಾರು ತಳಮನೆ ಕುಟುಂಬದ ಶ್ರೀ ವೆಂಕಟರಮಣ ದೇವರ ಹರಿಸೇವೆ ಮತ್ತು ದೈರ್ಮದೈವಗಳ ಧರ್ಮನಡಾವಳಿಯು ಮಾ. 29 ಮತ್ತು 30 ರಂದು ನಡೆಯಿತು.

ಮಾ. 28ರಂದು ಗಣಪತಿ ಹವನ, ನಾಗತಂಬಿಲ, ಮುನಿಸ್ವಾಮಿಗೆ ಪೇರಾರ್ಚನೆ, ಉಳ್ಳಾಕುಲುಗೆ ತಂಬಿಲ, ಮಾ. 29ರಂದು ವೆಂಕಟರಮಣ ದೇವರ ಹರಿಸೇವೆ, ಅನ್ನಸಂತರ್ಪಣೆ, ಕೆಂಚಿರಾಯನ ಪೂಜೆ, ರಾತ್ರಿ ತೊಡಿಕಾನ ಕ್ಷೇತ್ರದಿಂದ ಪಾಷಾಣಮೂರ್ತಿ ಅಮ್ಮನ ಭಂಡಾರ ಬಂದು, ಅನ್ನಸಂತರ್ಪಣೆ ನಡೆಯಿತು.

ನಂತರ ರಾತ್ರಿ ದೈವಗಳಿಗೆ ಕೂಡಿ ಉಪದೈವಗಳ ಕೋಲ ನಡೆಯಿತು. ಮಾ. 3೦ರಂದು ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ರಕ್ತೇಶ್ವರಿ ದೈವಗಳ ಕೋಲ, ಧರ್ಮದೈವಗಳ ಧರ್ಮ ನಡಾವಳಿ, ಧರ್ಮದೈವ ರುದ್ರಚಾಮುಂಡಿ, ವಿಷ್ಣುಮೂರ್ತಿ, ಪಾಷಾಣಮೂರ್ತಿ ದೈವಗಳ ನೇಮ ನಡೆಯಿತು. ಸಂಜೆ ಗುಳಿಗ ಮತ್ತು ಅಂಗರ ದೈವಗಳ ಕೋಲ, ಅನ್ನಸಂತರ್ಪಣೆ ನಡೆಯಿತು.
ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದು ದೈವದ ಗಂಧ ಪ್ರಸಾದ ಸ್ವೀಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.