ಸಾಲ್ತಾಡಿಯಲ್ಲಿ ಕೈಕೊಟ್ಟ ಹಳೆ ಬೋರ್‌ವೆಲ್; ನೀರಿಗಾಗಿ ತತ್ವಾರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪಂಚಾಯತ್‌ನಿಂದ ಮತ್ತೊಂದು ಹೊಸ ಬೋರ್ ಅಳವಡಿಕೆ

ಶ್ರಮದಾನದ ಮೂಲಕ ಕೆಲಸ : ಹಾರೆ ಹಿಡಿದು ಕೆಲಸ ಮಾಡಿದ ಪಂಚಾಯತ್ ಸದಸ್ಯೆ!

 

ಗುತ್ತಿಗಾರು ಗ್ರಾ.ಪಂ ವ್ಯಾಪ್ತಿಯ ಸಾಲ್ತಾಡಿಯಲ್ಲಿ ಹಳೆ ಬೋರ್ ವೆಲ್ ಕೈಕೊಟ್ಟ ಹಿನ್ನಲೆಯಲ್ಲಿ ಸುಮಾರು 2೦ ಕ್ಕಿಂತಲೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ನೀರಿನ ಬವಣೆ ತಪ್ಪಿಸಲು ಪಂಚಾಯತ್ ವತಿಯಿಂದ ಬೋರ್ ಕೊರೆಸಿ ಭರ ಪೂರ ನೀರು ಲಭಿಸಿದೆ. ನೀರಿನ ಬಳಕೆದಾರರು ಶ್ರಮದಾನದ ಮೂಲಕ ಪೈಪ್ ಅಳವಡಿಸುವ ಕೆಲಸ ಮಾಡುತಿದ್ದು, ಸ್ವತಃ ಆ ಭಾಗದ ಗ್ರಾ.ಪಂ ಸದಸ್ಯೆ ಭಾರತಿ ಸಾಲ್ತಾಡಿಯವರೂ ಹಾರೆ ಹಿಡಿದು ಕೆಲಸ ಮಾಡಿ ಗಮನ ಸೆಳೆದಿದ್ದಾರೆ.

ಸುಮಾರು ೨೫ ದಿನಗಳಿಂದ ಸಾಲ್ತಾಡಿಯ ಭಾಗದ ಜನರಿಗೆ ಕುಡಿಯುವ ನೀರು ಸರಬರಾಜು ನಿಂತಿದ್ದು ನೀರಿನ ಅಭಾವ ಎದುರಿಸುತ್ತಿದ್ದರು. ಈ ಹಿಂದೆ ಬೇರೊಂದು ಬೋರ್ ನಿಂದ ನೀರು ಸರಬರಾಜು ಆಗುತಿದ್ದು ಅದರ ನೀರು ಬತ್ತಿ ಹೋಗಿರುವ ಕಾರಣ ಇಲ್ಲಿನ ನಿವಾಸಿಗಳಿಗೆ ನೀರು ಇಲ್ಲದಂತಾಗಿತ್ತು. ಅಲ್ಲದೆ ಈ ಭಾಗದ ಜನರು ಕೂಲಿ ಕೆಲಸಕ್ಕೂ ಹೋಗಲಾಗದೆ ಕೆಲಸಕ್ಕೆ ರಜೆ ಹಾಕಿ ದೂರದಿಂದ ನೀರು ಹೊತ್ತು ತರಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ಬಗ್ಗೆ ಪಂಚಾಯತ್ ಗೂ ತಿಳಿಸಲಾಗಿತ್ತು. ಒಂದೊಮ್ಮೆ ಪ್ರತಿಭಟನೆ ಮಾಡಲು ಈ ಭಾಗದ ಜನರು ಮುಂದಾಗಿದ್ದರು. ಇದನ್ನು ಮನಗಂಡ ಪಂಚಾಯತ್ ವತಿಯಿಂದ ತುರ್ತಾಗಿ ಈ ಭಾಗದಲ್ಲಿ ಹೊಸ ಬೋರು ಕೊರೆಸಲು ನಿರ್ಧರಿಸಿ ಮಾ.೨೮ ರಂದು ಬೋರ್ ಕೊರೆಸಿತ್ತು. ಈ ಬೋರ್‌ನಿಂದಾಗಿ ಇಲ್ಲಿಗೆ ಬೇಕಾದಷ್ಟು ನೀರು ಲಭಿಸಿದೆ.
ಹಳೆ ಬೋರ್ ನಿಂದ ಪಂಪ್ ತೆಗೆದು ಹೊಸ ಬೋರ್ ಗೆ ಅಳವಡಿಸಲಾಗಿದೆ. ಹೊಸ ಬೋರ್ ನಿಂದ ನೀರು ಸರಬರಾಜಿನ ಪೈಪ್ ಅಳವಡಿಕೆಗಾಗಿ ಈ ಭಾಗದ ಮಹಿಳೆಯರು, ಪುರುಷರು ಕೈ ಜೋಡಿಸಿ ರಸ್ತೆ ಬದಿ ಕಣಿ ತೆಗೆದು ಪೈಪ್ ಅಳವಡಿಕೆಯಲ್ಲಿ ತೊಡಗಿದ್ದಾರೆ. ಅವರೊಂದಿಗೆ ಈ ವಾರ್ಡ್ ಗ್ರಾ.ಪಂ ಸದಸ್ಯೆ ಭಾರತಿ ಸಾಲ್ತಾಡಿ ಸ್ವತಃ ಹಾರೆ ಹಿಡಿದು ಕೆಲಸ ಮಾಡಿ ತಮ್ಮ ಜವಾಬ್ದಾರಿ ಪ್ರದರ್ಶಿಸಿದ್ದಾರೆ. ಅಂತೂ ಅತೀ ತುರ್ತಾಗಿ ಆಗ ಬೇಕಾದ ಸಮಸ್ಯೆ ಗೆ ಪಂಚಾಯತ್, ಜನರು ಕೈ ಜೋಡಿಸಿದ ಕಾರಣ ಸಮಸ್ಯೆ ಬಗಹರಿಯುವ ಹಂತದಲ್ಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.