ಅರಂಬೂರಿನ ಅಂಬಿಕಾ ಮಹಿಳಾ ಮಂಡಲದವರು ಇಡ್ಯಡ್ಕ ಶಾಲಾ ಮಕ್ಕಳಿಗೆ ಬಿಸಿಊಟದ ವ್ಯವಸ್ಥೆಗಾಗಿ 25 ತಟ್ಟೆಗಳನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಹೇಮಂತಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಂಬಿಕಾ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಕವಿತಾ, ಕಾರ್ಯದರ್ಶಿ ಶ್ರೀಮತಿ ಶ್ರೀದೇವಿ ಭಟ್,ಉಪಾಧ್ಯಕ್ಷೆ ಶ್ರೀಮತಿಲಕ್ಷ್ಮೀ ಭಟ್,ನಿರ್ದೇಶಕರಾದ ಶ್ರೀಮತಿ ಭಾರತಿ, ಶ್ರೀಮತಿರಾಜೀವಿ, ಶ್ರೀಮತಿ ಶೋಭಾ ರೈ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ಶ್ರೀಮತಿ ವಿಜಯಲಕ್ಷ್ಮಿ ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿರೇಖಾ ವಂದಿಸಿದರು. ಸಹಶಿಕ್ಷಕರು, ಎಸ್. ಡಿ.ಎಂ.ಸಿ ಸದಸ್ಯರು ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.