ಆಲೆಟ್ಟಿ ಟ್ರೇಡರ್ಸ್ ನಲ್ಲಿ ಎಸ್. ಕೆ.ಎಂ. & ಕ್ರಿಷಿ ಕಂಪೆನಿಯ ಪಶು ಆಹಾರಗಳ ಅಧಿಕೃತ ಮಾರಾಟ ಕೇಂದ್ರದ ಉದ್ಘಾಟನೆ

Advt_Headding_Middle
Advt_Headding_Middle

 

ಸುಳ್ಯ ಗಾಂಧಿನಗರ ಆಲೆಟ್ಟಿ ರಸ್ತೆಯ ಗುರುಂಪುವಿನಲ್ಲಿರುವ ಮುಸ್ತಾಫ ಕಮ್ಮಾಡಿ ಹಾಗೂ ಶಬೀರ್ ಪೆರಾಜೆ ಯವರ ಪಾಲುದಾರಿಕೆಯ ಆಲೆಟ್ಟಿ ಟ್ರೇಡರ್ಸ್ ನಲ್ಲಿ ಎಸ್. ಕೆ.ಎಂ. ಅನಿಮಲ್ ಫೀಡ್ಸ್ & ಫುಡ್ಸ್ (ಇಂಡಿಯಾ) ರವರ ಕ್ಯಾಟಲ್ ಫೀಡ್ಸ್ ಮತ್ತು ಕ್ರಿಷಿ ನ್ಯೂಟ್ರೀಶನ್ ಕಂ.ಪ್ರೈ. ಲಿ. ರವರ ಜಾನುವಾರುಗಳ ಉತ್ತಮ ಆಹಾರಗಳ ಅಧಿಕೃತ ಮಾರಾಟ ಕೇಂದ್ರದ ಉದ್ಘಾಟನೆಯು ಮಾ.31 ರಂದು ನಡೆಯಿತು. ಸುಳ್ಯ ಎ.ಪಿ.ಯಂ.ಸಿ. ಸದಸ್ಯರಾದ ಆದಂ ಹಾಜಿ ಕಮ್ಮಾಡಿ ಯವರು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಪಿ.ಬಿ, ನ್ಯಾಯವಾದಿ ನ.ಪಂ.ಸದಸ್ಯರಾದ ವೆಂಕಪ್ಪ ಗೌಡ ಸುಳ್ಯ, ಉಮ್ಮರ್ ಕೆ ಎಸ್, ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಆಲೆಟ್ಟಿ ಪಂ.ಸದಸ್ಯ ಸತ್ಯ ಕುಮಾರ್ ಆಡಿಂಜ,
ನ.ಪಂ.ಮಾಜಿ ಅಧ್ಯಕ್ಷ ಸಂಶುದ್ದೀನ್ ಎಸ್, ಸುಳ್ಯ ಎಂ.ಎಂ.ಟ್ರೇಡರ್ಸ್ ಮಾಲಕ ಮಜೀದ್ ಎಂ.ಎಂ, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಮುಸ್ತಾಫ ಜನತಾ, ಸುಳ್ಯ ಅಜ್ ವಾ ಸಾಫ್ಟ್ ಡ್ರಿಂಕ್ಸ್ ನ ಅಬ್ದುಲ್ ಕಲಾಂ, ಪ್ರಗತಿಪರ ಕೃಷಿಕ ಬಾಪೂ ಸಾಹೇಬ್ ಅರಂಬೂರು, ಜನತಾ ಗ್ರೂಪ್ ನ ಮಜೀದ್ ಜನತಾ, ಸುಳ್ಯ ಅಲ್ಪ. ಸಂ.ಸ.ಸಂಘದ ನಿರ್ದೇಶಕ ಶಾಫಿ ಕುತ್ತಮೊಟ್ಟೆ, ಯುವ ಉದ್ಯಮಿ ರಂಜಿತ್ ಪೂಜಾರಿ ಸುಳ್ಯ, ಗಾಂಧಿನಗರ ಎಸ್. ಎ.ಬಿಲ್ಡಿಂಗ್ ಮಾಲಕ ಎಸ್. ಎ.ಮಹಮ್ಮದ್ ಅಲಿ, ಹೋಟೆಲ್ ಮೆಟ್ರೊಪ್ಯಾಲೇಸ್ ನ ಉಮ್ಮರ್, ಪ್ಲಸ್ ಕೋಡ್ ಶಾಪ್ ಮಾಲಕ ಅತ್ತಾವುಲ್ಲಾ ಕೆ.ಎಂ, ಕ್ರಿಷಿ ಕಂಪೆನಿಯ ಡಿ.ಸಿ.ಎಂ.ಕೆ.ನಟರಾಜನ್ ರವರು ಉಪಸ್ಥಿತರಿದ್ದರು.

ಎಸ್. ಕೆ.ಎಂ.ರವರ ಪಶು ಆಹಾರವನ್ನು ಮೂರು ದಶಕಕ್ಕೂ ಹೆಚ್ಚು ಅನುಭವವಿರುವ ಪಶು ವೈದ್ಯರು ಮತ್ತು ತಾಂತ್ರಿಕ ತಜ್ಞರ ಸಹಾಯದಿಂದ ಉತ್ಪಾದಿಸಲಾಗುತ್ತಿದ್ದು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೆಚ್ಚು ಹಾಲು ಪಡೆದು ಅಧಿಕ ಲಾಭ ಗಳಿಸಲು ಸಾಧ್ಯವಾಗುವುದು. ಕ್ರಿಷಿ ಹಸುವಿನ ಆಹಾರ, ಕರುವಿನ ಆಹಾರ, ಬ್ರಾಯ್ಲರ್ ಕೋಳಿ ಆಹಾರ, ಮೊಟ್ಟೆ ಕೋಳಿ ಆಹಾರ, ನಾಟಿ ಕೋಳಿ ಆಹಾರ, ಆಡು, ಕಾಡೈ, ಮೀನಿನ ಆಹಾರಗಳು ಮಾರಾಟ ಕೇಂದ್ರದಲ್ಲಿ ಲಭ್ಯವಿದೆ. ಜಾನುವಾರುಗಳ ಆರೋಗ್ಯದಾಯಕ ಅತ್ಯುತ್ತಮ ಆಹಾರ ಇದಾಗಿದ್ದು ಅಧಿಕ ಹಾಲು ಉತ್ಪಾದನೆಗೆ ಸಹಕಾರಿಯಾಗುವುದು. ಪಶು ಆಹಾರ ನೀಡುವ ಕುರಿತು ಹೆಚ್ಚಿನ ಮಾಹಿತಿಗಾಗಿ ಮಾರಾಟ ಕೇಂದ್ರವನ್ನು ಸಂಪರ್ಕಿಸುವಂತೆ ಮಾಲಕರು ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.