ಪೇರಾಲು ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಮುಂಭಡ್ತಿ ಪಡೆದು ಸಂಪಾಜೆಗೆ ವರ್ಗಾವಣೆಗೊಂಡ ಶಿಕ್ಷಕಿ ಶ್ರೀಮತಿ ಇಂದಿರಾವತಿ ಇವರಿಗೆ ಎಸ್.ಡಿ ಎಂ.ಸಿ ಹಾಗು ಶಾಲಾ ವತಿಯಿಂದ ಮಾ.31 ರಂದು ಬೀಳ್ಕೊಡುಗೆ ಕಾರ್ಯಕ್ರಮ ಸ .ಉ.ಹಿ.ಪ್ರಾ.ಶಾಲೆ ಪೇರಾಲು ಇಲ್ಲಿ ನಡೆಯಿತು.
ವೇದಿಕೆಯಲ್ಲಿ ಶಾಲಾ ಮುಖ್ಯಗುರು ಶ್ರೀಮತಿ ಸುನಂದಾ ಜಿ., ಶಾಲಾ ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಜಯಶ್ರೀ ಮಿತ್ತ ಪೇರಾಲು ಶಿಕ್ಷಕರಾದ ಮುಕುಂದ, ಲತಾಶ್ರೀ, ಸುನಂದ ಕೆ.ಜಿ, ಶಿಲ್ಪಾಗಾನಿಗ ಉಪಸ್ಥಿತರಿದ್ದರು.