ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಸುಬ್ರಹ್ಮಣ್ಯ ಇದರ ಬೆಳ್ಳಾರೆ ಶಾಖೆಯ ಶಾಖಾಧಿಕಾರಿ ಕಮಲಾವತಿ ಎನ್.ಎಸ್.ರವರು ಮಾ.31 ರಂದು ನಿವೃತ್ತಿ ಹೊಂದಿದರು. ಜ.31 ರಂದು ನಿವೃತ್ತಿ ಹೊಂದಿದ್ದರೂ ಎರಡು ತಿಂಗಳು ಸೇವೆಗಳನ್ನು ಮುಂದುವರೆಸಲಾಗಿತ್ತು. ಕುಕ್ಕುಜಡ್ಕ ಬೊಳ್ಳೂರು ಪದ್ಮಯ್ಯ ಮಾಸ್ತರ್ ಮತ್ತು ಸೀತಮ್ಮ ದಂಪತಿಗಳ ಪುತ್ರಿಯಾಗಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಕುಕ್ಕುಜಡ್ಕದಲ್ಲಿ, ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಬೆಳ್ಳಾರೆಯಲ್ಲಿ ಪಡೆದು ಸಹಕಾರ ತರಬೇತಿಯನ್ನು ಮಡಿಕೇರಿಯಲ್ಲಿ ಪಡೆದಿರುತ್ತಾರೆ. ಕುಕ್ಕುಜಡ್ಕ ಹಾಲು ಉತ್ಪಾಕರ ಸಂಘ ಹಾಗೂ ಸಿ.ಎ ಬ್ಯಾಂಕ್ ಸುಳ್ಯ ಇದರಲ್ಲಿ ಕೆಲ ವರ್ಷ ಕೆಲಸ ಮಾಡಿದ್ದು, 1989 ರಿಂದ ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರಿ ಸಂಘ ಇದರ ಬೆಳ್ಳಾರೆ ಶಾಖೆಯ ಗುಮಾಸ್ತೆಯಾಗಿ ಸೇರ್ಪಡೆಗೊಂಡರು.
1991 ರಿಂದ ಶಾಖಾಧಿಕಾರಿಯಾಗಿ ಭಡ್ತಿ ಹೊಂದಿ ಕರ್ತವ್ಯ ನಿರ್ವಹಿಸಿದ್ದಾರೆ.
ಇವರ ಪತಿ ಸೀತಾರಾಮ ಗೌಡ ನಿಡ್ಡಾಜೆ ನಿವೃತ್ತ ಅಂಚೆ ಪಾಲಕರು. ಮಕ್ಕಳು ಪ್ರಮೋದ ಕುಮಾರ್ ಎನ್.ಎಸ್. ದುಬೈಯಲ್ಲಿ ಎ.ಸಿ. ಮೆಕ್ಯಾನಿಕ್ ಆಗಿದ್ದಾರೆ. ಮತ್ತೊಬ್ಬ ಮಗ ಲೊಕೇಶ್ ಸುಳ್ಯದ ಫೈನಾನ್ಸ್ ಒಂದರ ಉದ್ಯೋಗಿ. ಪ್ರಸ್ತುತ ಬೆಳ್ಳಾರೆಯ ಉಮಿಕ್ಕಳದಲ್ಲಿ ವಾಸವಿದ್ದಾರೆ.