ಅಮರಮೂಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯು ರಚನೆಗೊಂಡು ಪ್ರಥಮ ಹಂತದ ಸಭೆ ಹಾಗೂ ಮನವಿ ಪತ್ರ ಬಿಡುಗಡೆಯು ಏ.1 ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು. ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿಯವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದು ಪ್ರಸಾದ ವಿತರಿಸಲಾಯಿತು.
ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ಎಂ.ಜಿ.ಸತ್ಯನಾರಾಯಣ ಸಮಿತಿಯ ಸದಸ್ಯರಾಗಿ ಎಂ.ಎಸ್. ಶ್ರೀಶಕುಮಾರ್,ಎಂ.ಎಸ್. ಹರ್ಷಕುಮಾರ್, ಎಂ.ಎಸ್. ಪ್ರಕಾಶ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಸಚಿವ ಎಸ್. ಅಂಗಾರ, ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಅಧ್ಯಕ್ಷ ರಾಘವೇಂದ್ರ ಪುಳಿಮಾರಡ್ಕ, ಪ್ರ. ಕಾರ್ಯದರ್ಶಿ ಜನಾರ್ದನ ಆಚಾರ್ಯ ಕುಂಟಿಕಾನ, ಕಾರ್ಯದರ್ಶಿ ರಾಮಕೃಷ್ಣ ಕಂಜರ್ಪಣೆ, ಖಜಾಂಜಿ ಕೆದ್ಲ ನರಸಿಂಹ ಭಟ್, ಉಪಾಧ್ಯಕ್ಷರಾಗಿ ಸಾಯಿಪ್ರಸಾದ್ ಅಜ್ಜನಗದ್ದೆ, ಮುರಳೀಧರ ಕೋಡ್ತುಗುಳಿ, ಅರುಣ್ ನಾಯರ್ ಕಲ್ಲು, ಸದಸ್ಯರಾಗಿ ವೆಂಕಟ್ರಮಣ ಇಟ್ಟಿಗುಂಡಿ, ಉಮೇಶ್ ಚಿಲ್ಪಾರು, ಪವನ್ ಮುಂಡ್ರಾಜೆ, ಉದಯಕುಮಾರ್, ಪರಮೇಶ್ವರ ಪಡ್ಪು ಹಾಗೂ ಗೌರವ ಸಲಹೆಗಾರರಾಗಿ ವಿಶ್ವೇಶ್ವರ ಉಪಾಧ್ಯಾಯ, ರಾಮಚಂದ್ರ ಶ್ರೀಪಾದ ಹೆಗಡೆ, ಅಪ್ಪಯ್ಯ ಆಚಾರ್ಯ, ಬಾಲಸುಬ್ರಮಣ್ಯ ಕಂಜರ್ಪಣೆ, ಅಶೋಕ ಕುಮಾರ್ ಕರಿಕ್ಕಳ, ಮಹೇಶ್ ಕರಿಕ್ಕಳ, ರಜತ್ ಭಟ್, ಯಂ.ಪಿ.ಉಮೇಶ,ಕೇಶವ ಪರಿವಾರ ರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಕಾರ್ಯದ ನಿಮಿತ್ತ ಮುದ್ರಿಸಿರುವ ಮನವಿ ಪತ್ರವನ್ನು ಆಡಳಿತ ಮೊಕ್ತೇಸರರು ಬಿಡುಗಡೆಗೊಳಿಸಿದರು. ಅವಳಿ ಗ್ರಾಮಗಳಲ್ಲಿ ಬೈಲುವಾರು ಸಮಿತಿ ರಚಿಸಿ ಸಂಚಾಲಕರನ್ನು ನೇಮಿಸಲಾಯಿತು.
ಪ್ರತೀ ಮನೆಗಳಿಗೆ ತೆರಳಿ ದೈವದ ಪ್ರಸಾದ ಮತ್ತು ಮನವಿ ಪತ್ರ ನೀಡಿ ದೇಣಿಗೆ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಶಿಲ್ಪಿ ಅಪ್ಪಯ್ಯ ಆಚಾರ್ಯ ರವರು ಪ್ರಥಮವಾಗಿ ದೇಣಿಗೆಯನ್ನು ಜೀರ್ಣೋದ್ಧಾರ ಕಾರ್ಯದ ಬಾಬ್ತು ನೀಡಿದರು. ಸಮಿತಿ ಸಂಚಾಲಕ ಗಣೇಶ್ ಪಿಲಿಕಜೆ ಸ್ವಾಗತಿಸಿದರು. ಪದ್ಮನಾಭ ಬೊಳ್ಳೂರು ವಂದಿಸಿದರು.ಗ್ರಾಮದ ಭಕ್ತಾದಿಗಳು ಪಾಲ್ಗೊಂಡಿದ್ದರು.