ಪುತ್ತೂರು ತಾಲೂಕಿನ ಪಾಲ್ತಾಡಿ ಮಂಜುನಾಥ ನಗರ ವಿವೇಕಾನಂದ ಯುವಕ ಮಂಡಲ ಕೊಡಮಾಡುವ
ಯುವಕ ಯುವಪ್ರಶಸ್ತಿ 2019 ಸಾಲಿನಲ್ಲಿ ಭಾಸ್ಕರ ಬಲ್ಯಾಯ ಮದ್ಲ ಅವರು ಆಯ್ಕೆಯಾಗಿದ್ದಾರೆ. ಅವರು ಪುತ್ತೂರು ತಾಲೂಕಿನ ಕಾವು ನನ್ಯ ಯುವಕ ಮಂಡಲದ ಪೂರ್ವಾಧ್ಯಕ್ಷ. ಅವರ ಅವಧಿಯಲ್ಲಿ ಅನೇಕ ಸಮಾಜಮುಖ ಕಾರ್ಯಗಳು ಮತ್ತು ಶಾಶ್ವತ ಯೋಜನೆಗಳನ್ನು ಮಾಡಲಾಗಿತ್ತು. ಇವರು ನಿಂತಿಕಲ್ಲಿನಲ್ಲಿ ಜ್ಯೋತಿಷ್ಯಾಲಯ ನಡೆಸುತ್ತಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಎ.3 ರಂದು ಮಂಜುನಾಥ ನಗರ ವಿನಾಯಕ ಮೈದಾನದಲ್ಲಿ ನಡೆಯಲಿದೆ.