ಕುಂಚಡ್ಕ ವಿಷ್ಣುಮೂರ್ತಿ ದೈವದ ಒತ್ತೆಕೋಲ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮದ ಕುಂಚಡ್ಕದಲ್ಲಿ ವರ್ಷಂಪ್ರತಿ ಜರುಗುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಏ.1 ಮತ್ತು 2 ರಂದು ನಡೆಯಿತು.ಏ.1 ರಂದು ಪ್ರಾತ:ಕಾಲ ಗಣಪತಿ ಹವನವಾಗಿ ಶುದ್ಧಿ ಕಲಶವಾಗಿ ಮೇಲೇರಿ ಕೂಡಿ ರಾತ್ರಿ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕೈವೀದು ನಡೆಯಿತು.

ಬಳಿಕ ಕುಂಚಡ್ಕ ಐನ್ ಮನೆಯಿಂದ ಮತ್ತು ವಯನಾಟ್ ಕುಲವನ್ ದೈವಸ್ಥಾನದಿಂದ ಭಂಡಾರ ತೆಗೆದು ಒಂದೆಡೆ ಸಂಗಮವಾಗಿ ಒತ್ತೆಕೋಲ ಮಜಲಿನವರೆಗೆ ಬಂದು ದೈವದ ದರ್ಶನ ಪಾತ್ರಿಯವರಿಂದ ಅಭಯದ ನುಡಿಯಾಗಿ ಮೇಲೇರಿಗೆ ಅಗ್ನಿ ಸ್ಪರ್ಶವಾಯಿತು. ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯಾಯಿತು.ನಂತರ ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ನಡೆಯಿತು. ಮರುದಿನ ಪ್ರಾತ:ಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶವಾಗಿ ಆಗಮಿಸಿದ ಭಕ್ತಾದಿಗಳಿಂದ ಹರಕೆ ಸಮರ್ಪಣೆಯಾಯಿತು. ಆಗಮಿಸಿದ ಸರ್ವರಿಗೂ ದೈವದ ಪ್ರಸಾದ ವಿತರಣೆಯಾಯಿತು.ಬಳಿಕ ಪೂರ್ವಾಹ್ನ ಮಾರಿಕಳ ಪ್ರವೇಶವಾಯಿತು.ಈ ಸಂದರ್ಭದಲ್ಲಿ ತಾಲೂಕು ಭಾರತೀಯ ತೀಯ ಸಮಾಜದ ಸದಸ್ಯರು ಸಹಕರಿಸಿದರು. ಕುಂಚಡ್ಕ ಕುಟುಂಬದ ಯಜಮಾನ ಮತ್ತು ಹಿರಿಯ, ಕಿರಿಯ ಸದಸ್ಯರು ಆಡಳ್ತೆದಾರರಾದ ತೀರ್ಥ ಕುಮಾರ್ ಕುಂಚಡ್ಕ ರವರು ಸರ್ವರನ್ನೂ ಸ್ವಾಗತಿಸಿದರು.ಕುಂಚಡ್ಕ ಬೈಲಿನ ಭಕ್ತಾದಿಗಳು ಸ್ವಯಂ ಸೇವಕರಾಗಿ ಸಹಕರಿಸಿದರು. ಊರ ಪರ ಊರ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಬೆಳಗ್ಗೆ ಪ್ರಸಾದ ವಿತರಣೆಯ ನಂತರ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.