ಆಲೆಟ್ಟಿ ಗ್ರಾಮದ ಬಡ್ಡಡ್ಕ ನಿವಾಸಿ ಹಿರಿಯ ನಾಟಿ ವೈದ್ಯರಾದ ಕುಂಜಿಲನ ಚಂಗಪ್ಪ ಗೌಡರವರು ಮಾ.23 ರಂದು ನಿಧನರಾಗಿದ್ದು ಅವರ ಉತ್ತರ ಕ್ರಿಯಾಧಿ ಸದ್ಗತಿ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಏ .2 ರಂದು ಮೃತರ ಸ್ವಗೃಹ ಬಡ್ಡಡ್ಕದಲ್ಲಿ ನಡೆಯಿತು. ಮೃತರ ಜೀವನಗಾಥೆಯ ಕುರಿತು ನ್ಯಾಯವಾದಿ ವಿದ್ಯಾದರ ಕುಡೆಕಲ್ಲು ರವರು ಮಾತನಾಡಿ ನುಡಿನಮನ ಸಲ್ಲಿಸಿದರು. ಈ ಸಂದರ್ಭ ಮೃತರ ಪತ್ನಿ ನಿವೃತ್ತ ಶಿಕ್ಷಕಿ ಶ್ರೀಮತಿ ಇಂದಿರಾದೇವಿ ಬಡ್ಡಡ್ಕ, ಪುತ್ರರಾದ ಪುಷ್ಪರಾಜ ಕೆ.ಸಿ, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ಪ್ರವೀಣ ಕೆ.ಸಿ, ಪುತ್ರಿ ಪ್ರಶಾಂತಿ ಕೆ.ಸಿ ಬಡ್ಡಡ್ಕ, ಸೊಸೆಯಂದಿರಾದ ಹೇಮಲತಾ, ವಿಶಾಲಾಕ್ಷಿ, ಶುಭಾಂಜಲಿ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬದ ಹಿರಿಯರು, ಕಿರಿಯರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು.