ಆಲೆಟ್ಟಿ ಗ್ರಾಮದ ನಾಗಪಟ್ಟಣ -ಮೇದಿನಡ್ಕ ಕರ್ನಾಟಕ ಅರಣ್ಯ ಅಭಿಧೃದ್ಧಿ ನಿಗಮದ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದ ತಂಗವೇಲು ನಾಗಪಟ್ಟಣ ರವರು ಮಾ.30 ರಂದು ನಿವೃತ್ತಿ ಹೊಂದಿರುತ್ತಾರೆ. ಇವರ ತಂದೆ ಕರ್ಪಯ್ಯ ಮತ್ತು ತಾಯಿ ನಲ್ಲಮ್ಮಾಳ್ ರವರು ಮೂಲತ: ಶ್ರೀಲಂಕಾದಿಂದ 1971 ರಲ್ಲಿ ಸುಳ್ಯಕ್ಕೆ ಬಂದು ಕೆ.ಎಫ್. ಡಿ.ಸಿ.ಯಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡರು. 1982 ರಲ್ಲಿ ತಂಗವೇಲು ಮೆಷಿನ್ ಆಪರೇಟರ್, ಗ್ರೇಡಿಂಗ್ ಸೆಕ್ಷನ್ ನಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡು ಫ್ಯಾಕ್ಟರಿಯ ವಿವಿಧ ಕೆಲಸವನ್ನು ನಿರ್ವಹಿಸಿರುತ್ತಾರೆ. ಸುದೀರ್ಘ 39 ವರ್ಷ ಸೇವೆ ಸಲ್ಲಿಸಿ ಮಾ.30 ವೃತ್ತಿಯಿಂದ ನಿವೃತ್ತಿ ಹೊಂದಿರುತ್ತಾರೆ. ಆಲೆಟ್ಟಿ ಪಂಚಾಯತ್ ಸದಸ್ಯರಾಗಿ 2 ಅವಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಆಲೆಟ್ಟಿ ಸೊಸೈಟಿಯ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ. ಪತ್ನಿ ಮಣಿಮೇಘಲೈ, ಪುತ್ರ ಮದನ್, ಪುತ್ರಿ ಸಂಗೀತಾ ರೊಂದಿಗೆ ಆಲೆಟ್ಟಿಯ ಕುದ್ಕುಳಿ ಎಂಬಲ್ಲಿ ವಾಸವಾಗಿದ್ದಾರೆ.