ಐವರ್ನಾಡು ಗ್ರಾಮದ ಶ್ರೀ ಕ್ಷೇತ್ರ ಬರೆಮೇಲು ತ್ರಿಶಕ್ತಿ ಸ್ವರೂಪಿಣಿ ಮಹಾಕಾಳಿ ಅಮ್ಮನವರ ಕ್ಷೇತ್ರದಲ್ಲಿ ವಾರ್ಷಿಕ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯು ಎ.2 ರಂದು ನಡೆಯಿತು .
ಕ್ಷೇತ್ರದ ಧರ್ಮರಸು ಕರುಣಾಕರ ಗೌಡರವರು ಸ್ವಾಗತಿಸಿ ಮಾತನಾಡಿ ಕೋವಿಡ್ ನಿಯಮಾನುಸಾರವಾಗಿ ಕ್ಷೇತ್ರದಲ್ಲಿ ವೈದಿಕ ಕಾರ್ಯಕ್ರಮಗಳು ಯಥಾಸ್ಥಿತಿಯಾಗಿ ನಡೆಸುವ ಬಗ್ಗೆ ಭಕ್ತಾದಿಗಳ ಜೊತೆ ಚರ್ಚಿಸಿ ತೀರ್ಮಾನವನ್ನು ಕೈಗೊಂಡರು.
ಸಭೆಯಲ್ಲಿ ಚಂದ್ರ ಕೋಲ್ಚಾರ್ ನವೀನ ಚಾತುಬಾಯಿ, ಎ.ಪಿ.ಎಂ.ಸಿ ಉಪಾಧ್ಯಕ್ಷ ನವೀನ ಕುಮಾರ್ ಸಾರಕೆರೆ, ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕತ್ಲಡ್ಕ ದೇವಿದಾಸ, ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಪ್ರಸಾದ್ ಬೆಳ್ಳಾರೆ, ಪ್ರೇಮಚಂದ್ರ ಪ್ರೇಮ್ ಸ್ಟುಡಿಯೋ ಬೆಳ್ಳಾರೆ, ಐವರ್ನಾಡು ಭಜರಂಗದಳ ಸಂಚಾಲಕ ಅನಿಲ್ ಪೂಜಾರಿ,ಶ್ರೀ ಕ್ಷೇತ್ರದಲ್ಲಿ 60 ಸಾವಿರ ವೆಚ್ಚದಲ್ಲಿ ಬ್ರಹ್ಮ ಪಾದ ದ್ವಾರದ ದಾನಿಯಾದ ಪ್ರಸಾದ್ ದೇವರಕಾನ, ದೇವಿಪ್ರಸಾದ್ ಶುಂಠಿತ್ತಡ್ಕ, ವಿಶ್ವಹಿಂದೂ ಪರಿಷತ್ ಘಟಕದ ಪದಾಧಿಕಾರಿಗಳು,ಭಕ್ತಾದಿಗಳು ಊರಿನ ಗಣ್ಯರು ಉಪಸ್ಥಿತರಿದ್ದರು.
ವರ್ಷಂಪ್ರತಿ ನಡೆಯುವ ವೈದಿಕ ಕಾರ್ಯಕ್ರಮಗಳು ಯಥಾಸ್ಥಿತಿಯಾಗಿ ನಡೆಯುತ್ತದೆ ಎಂದು ಬರೆಮೇಲು ಕರುಣಾಕರ ಗೌಡರು ತಿಳಿಸಿದ್ದಾರೆ.