ಧಾರ್ಮಿಕ ಸಭೆ- ಸಾಂಸ್ಕೃತಿಕ ಕಾರ್ಯಕ್ರಮಗಳು
ಶ್ರೀ ಉಳ್ಳಾಕುಲು ಕಲಾರಂಗ ಪಲ್ಲೋಡಿ ಪಂಜ ಇದರ ವತಿಯಿಂದ ಶ್ರೀ ಉಳ್ಳಾಕುಲು , ಶ್ರೀ ಚಾಮುಂಡಿ ಹಾಗೂ ಪರಿವಾರ ದೈವಗಳ ಕಾಲಾವಧಿ ನೇಮೋತ್ಸವದ ಪ್ರಯುಕ್ತ ಸಾಂಸ್ಕೃತಿಕ ,ಧಾರ್ಮಿಕ ಸಭಾ ಕಾರ್ಯಕ್ರಮ ಎ.3.ರಂದು ಜರುಗಿತು. ಶ್ರೀ ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಕವನ್ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಿದ್ದರು. ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಶ್ರೀ ಉಳ್ಳಾಕುಲು ಕಲಾರಂಗದ ಗೌರವಾಧ್ಯಕ್ಷ ನೇಮಿರಾಜ್ ಪಲ್ಲೋಡಿ, ಪಲ್ಲೋಡಿ ತಳಮನೆ ದೇವಸ್ಯ ಲಕ್ಷ್ಮೀಶ್ ಗಾಂಭೀರ, ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದಾಮೋದರ ಪಲ್ಲೋಡಿ, ಕಲಾರಂಗದ ಕಾರ್ಯದರ್ಶಿ ಪ್ರದೀಪ್ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಜ ಗ್ರಾಮ ಪಂಚಾಯತ್ ನಿಕಟಪೂರ್ವಾಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲುರವರ
ಅವಧಿಯಲ್ಲಿ ಮಾಡಿರುವ ಗ್ರಾಮಾಭಿವೃದ್ಧಿಯನ್ನು ಗುರುತಿಸಿ ಕಾರ್ಯಪ್ಪ ಗೌಡ ಚಿದ್ಗಲ್ಲುರವರನ್ನು ಮತ್ತು ಅನೇಕ ಪುಟಾಣಿಗಳಿಗೆ ಯಕ್ಷಗಾನ ಶಿಕ್ಷಕನಾಗಿ ಸೇವೆಸಲ್ಲಿಸುತ್ತಿರುವ ಯಕ್ಷಮಣಿ ಗಿರೀಶ್ ಗಡಿಕಲ್ಲು ರವರನ್ನು ಸನ್ಮಾನಿಸಲಾಯಿತು.ಕಲಾರಂಗದ ಗೌರವಾಧ್ಯಕ್ಷ ನೇಮಿರಾಜ್ ಪಲ್ಲೋಡಿ ಯವರು ನಿವೃತ್ತ ಶಿಕ್ಷಕ ದಿ.ಈಶ್ವರ ಆಳ್ವ ರವರಿಗೆ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಇಂಚರ ಪಲ್ಲೋಡಿ ಪ್ರಾರ್ಥಿಸಿದರು. ಪ್ರಕಾಶ್ ಜಾಕೆ ಸ್ವಾಗತಿಸಿದರು. ಸಂದೀಪ್ ಪಲ್ಲೋಡಿ ಪ್ರಾಸ್ತಾವಿಕ ಗೈದರು. ಕೆ ಕೃಷ್ಣ ವೈಲಾಯ ಅತಿಥಿಗಳ ಪರಿಚಯಿಸಿದರು. ಶ್ರೀಮತಿ ಧನ್ಯ ಪ್ರವೀಣ್ ಕಲ್ಲಪಳ್ಳಿ ನಿರೂಪಿಸಿದರು. ಪ್ರದೀಪ್ ಪಲ್ಲೋಡಿ ವಂದಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರದ ಪಂಜ ಇದರ ವಿದ್ಯಾರ್ಥಿಗಳಿಂದ
, ನಾಟ್ಯಗುರು ಗಿರೀಶ್ ಗಡಿಕಲ್ಲು ನಿರ್ದೇಶನದ ಯಕ್ಷಗಾನ ಬಯಲಾಟ ಪ್ರಚಂಡ ಭಾರ್ಗವ ಮತ್ತು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕುಡಿಕೆಯಲ್ಲಿ ಪ್ರಶಾಂತ್ ರೈ ಪಲ್ಲೋಡಿ ಸಂಯೋಜಕತ್ವದಲ್ಲಿ ಯಕ್ಷಗಾನ ಕೋಟಿ ಚೆನ್ನಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ರಾತ್ರಿ ದೈವಗಳ ಭಂಡಾರ ತೆಗೆದು ನೇಮೋತ್ಸವ ಜರುಗಿತು.