ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ, ಚೆಂಬು ಗ್ರಾಮ ಪಂಚಾಯತ್ ಮತ್ತು ಶ್ರೀ ಭಗವಾನ್ ಸಂಘ ಊರುಬೈಲು ಇವರ ಸಹಯೋಗದಲ್ಲಿ ಎ. ೩ ರಂದು ಚೆಂಬು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ , ಗ್ರಾಮದ ೪೫ ವರ್ಷ ಮೇಲ್ಪಟ್ಟ ಜನರಿಗೆ ಉಚಿತ ಕೊರೋನಾ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕುಸುಮ ಯೋಗೇಶ್ವರ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಪಯಸ್ವಿನಿ ಸೊಸೈಟಿ ಅದ್ಯಕ್ಷ ಅನಂತ್ ಊರುಬೈಲು ,ಆಸ್ಪತ್ರೆಯ ಆಡಳಿತಾಧಿಕಾರಿ ಮಲ್ಲಿಕಾರ್ಜುನ್ರವರು ಕೋವಿಡ್ ಲಸಿಕೆಯ ಮಹತ್ವ ಮತ್ತು ಕೋವಿಡ್ ನ್ನು ತಡೆಗಟ್ಟಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಶ್ರೀ ಭಗವಾನ್ ಸಂಘದ ಅದ್ಯಕ್ಷ ರವಿರಾಜ್ ಹೊಸೂರು ,ಗ್ರಾ.ಪಂ ಸದಸ್ಯ ಆದಂ ಸೆಂಟ್ಯಾರ್ ,ಕಂದಾಯ ಅಧಿಕಾರಿ ರೇಷ್ಮಾ ರವರು ಉಪಸ್ಥಿತರಿದ್ದರು.
ಗ್ರಾಮದ ಸುಮಾರು ೧೦೭ ಮಂದಿ ಲಸಿಕೆಯ ಸೌಲಭ್ಯ ಪಡೆದುಕೊಂಡರು. ಎ. ೬ ರಂದು ಮತ್ತೊಮ್ಮೆ ಈ ಶಿಬಿರ ಚೆಂಬು ಪಯಸ್ವಿನಿ ಸೊಸೈಟಿ ಸಭಾಂಗಣದಲ್ಲಿ ನಡೆಯಲಿದೆ.