ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಭರತ್ ನೆಕ್ರಾಜೆ, ಉಪಾಧ್ಯಕ್ಷರಾಗಿ ಸುರೇಶ್ ಬಾಲಾಡಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಭರತ್ ನೆಕ್ರಾಜೆ ಮತ್ತು ಉಪಾಧ್ಯಕ್ಷರಾಗಿ ಸುರೇಶ್ ಬಾಲಾಡಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಭರತ್ ನೆಕ್ರಾಜೆಯವರನ್ನು ನಿರ್ದೇಶಕ ಗಣೇಶ್ ಕೆ.ಎಸ್. ಸೂಚಿಸಿ ಮಾಜಿ ಅಧ್ಯಕ್ಷ ಶಿವಪ್ರಸಾದ್ ಮಾದನಮನೆ ಅನುಮೋದಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶ್ ಬಾಲಾಡಿಯವರನ್ನು ನಿರ್ದೇಶಕ ರಾಮಣ್ಣ ಗೌಡ ಸೂಚಿಸಿ ಗಂಗಾಧರ ಪೈಲಾಜೆ ಅನುಮೋದಿಸಿದರು. ನಿರ್ದೇಶಕರಾದ ದಿನೇಶ್ ಕೈಯಾಳ, ಪಿ. ಪರಮೇಶ್ವರ ಪರವ ಪೀಕಟೆಮಜಲು, ರಮೇಶ್ ನಾಯ್ಕ ಬೂದಿಪಳ್ಳ, ಲಕ್ಷ್ಮೀನಾರಾಯಣ ಉಡ್ದೋಳಿ, ಶೀಲಾ ಕುಮಾರಿ ಅಂಬೆಕಲ್ಲು ಮತ್ತು ದೇವಿಕೃಪಾ ಪರಮಲೆ, ಕಾರ್ಯದರ್ಶಿ ಶ್ರೀಮತಿ ಗೀತಾ ಮತ್ತು ‌ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಸಹಕಾರ ಸಂಘಗಳ ಸಹಾಯಕ ಅಧೀಕ್ಷರಾದ ನಾಗೇಂದ್ರ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಭರತ್ ನೆಕ್ರಾಜೆ: ಮುಂದಿನ 5 ವರಗಷಗಳ‌‌ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಭರತ್ ನೆಕ್ರಾಜೆಯವರು ನಿವೃತ್ತ ಮುಖ್ಯೋಪಾಧ್ಯಾಯ ದಿ. ಈಶ್ವರ ಮಾಸ್ತರ್ ನೆಕ್ರಾಜೆಯವರ ಪುತ್ರರಾಗಿದ್ದು, 4ನೇ ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇವರು ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷರಾಗಿ, ಗುತ್ತಿಗಾರು ರಬ್ಬರ್ ಬೆಳೆಗಾರರ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವುದಲ್ಲದೆ ಜೇಸಿಐ ಪಂಜ ಪಂಚಶ್ರೀ, ಸುಬ್ರಹ್ಮಣ್ಯ ರೋಟರಿ ಕ್ಲಬ್‌ ಮತ್ತು ಯೇನೆಕಲ್ಲು ರೈತ ಯುವಕ ಮಂಡಲದ ಪೂರ್ವಾಧ್ಯಕ್ಷರಾಗಿದ್ದಾರೆ. ಭಾರತೀಯ ಜಿವ ವಿಮಾ ನಿಗಮದ ಪ್ರತಿನಿಧಿಯೂ, ಪತ್ರಿಕಾ ವರದಿಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಸುರೇಶ್ ಬಾಲಾಡಿ: ಸುರೇಶ್ ಬಾಲಾಡಿಯವರು ಪ್ರಗತಿಪರ ಕೃಷಿಕರಾಗಿದ್ದು, 3ನೇ ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.