ದ.ಕ.ಜಿ.ಪಂ, ಬಾಳಿಲ ಗ್ರಾಮ ಪಂಚಾಯತ್ ಮತ್ತು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳಿಲ ಮತ್ತು ಮುಪ್ಪೇರ್ಯ ಗ್ರಾಮದ 45 ವರ್ಷ ಮೇಲ್ಪಟ್ಟ ಮುಪ್ಪೇರ್ಯ ಗ್ರಾಮದ ಗ್ರಾಮಸ್ಥರಿಗೆ ಎ.05 ರಂದು ಬೆಳಿಗ್ಗೆ ಗಂಟೆ 9.30 ರಿಂದ ಸಂಜೆ 4 .00 ರವರೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂದ್ರಾಜೆಯಲ್ಲಿ ಕೊರೊನಾ ಲಸಿಕೆ ನೀಡಲಾಗುವುದು.
ಎ. 08 ರಂದು ಬಾಳಿಲ ಗ್ರಾಮದ 45 ವರ್ಷ ಮೇಲ್ಪಟ್ಟ ಗ್ರಾಮಸ್ಥರಿಗೆ ಬೆಳಿಗ್ಗೆ ಗಂಟೆ 9.30 ರಿಂದ ಸಂಜೆ 4.00 ರವರೆಗೆ ಕೊರೊನಾ ಲಸಿಕೆ ನೀಡಲಾಗುವುದು.
ಲಸಿಕೆ ಪಡೆಯಲು ಬರುವಾಗ ಆಧಾರ್ ಕಾರ್ಡ್ ಅಥವಾ ಸರಕಾರದಿಂದ ನೀಡಿದ ಭಾವಚಿತ್ರವಿರುವ ಯಾವುದೇ ಗುರುತಿನ ಚೀಟಿಯನ್ನು ಮತ್ತು ಮೊಬೈಲ್ ನಂಬರನ್ನು ತರಬೇಕಾಗಿ ವಿನಂತಿಸಲಾಗಿದೆ.