ವಿಶ್ವದಾಂದ್ಯತ ಕ್ರೈಸ್ತರು ಆಚರಿಸುವ ಗುಡ್ಪ್ರೈಡೆಯ ಹಿಂದಿನ ದಿನವಾದ ಎ. 1 ರಂದು, ಕಲ್ಲುಗುಂಡಿಯ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್ನಲ್ಲಿ ಆಚರಿಸಲಾಯಿತು.
ಯೇಸು ಕ್ರಿಸ್ತರು ಶಿಲುಬೆಗೆ ಏರುವ ಮುನ್ನ ತನ್ನ 12 ಮಂದಿ ಶಿಷ್ಯರೊಂದಿಗೆ ಮಾಡಿದ ಕೊನೆಯ ಭೋಜನದ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಯಿತು. ಯೇಸುಕ್ರಿಸ್ತರನ್ನು ಶಿಲುಬೆಗೇರಿಸುವ ದಿನವಾದ ಗುಡ್ಪ್ರೈಡೆ (ಶುಭಶುಕ್ರವಾರ) ದಂದು ಚರ್ಚಿನಲ್ಲಿ ಶ್ರದ್ಧಾ ಭಕ್ತಿಯಿಂದ ಮೌನ ಪ್ರಾರ್ಥನೆ ಮಾಡುವುದರ ಮುಖಾಂತರ, ಹಾಗೂ ಸಂಜೆ ಚರ್ಚಿನಲ್ಲಿ ಗುಡ್ಪ್ರೈಡ್ಯ ದಿನದ ಕುರಿತು ಪ್ರವಚನವನ್ನು ಫಾ. ಪಾವ್ಲು ಕ್ರಾಸ್ತ ನೀಡಿದರು.
ಎ.೩ರಂದು ರಾತ್ರಿ ಪ್ರಭು ಕ್ರಿಸ್ತರ ವಿಜಯ ಸಂಕೇತವಾದ ಪಾಸ್ಖ ಹಬ್ಬವನ್ನು, ಬತ್ತಿಯ ಬೆಳಗುವಿಕೆಯ, ಪ್ರಭು ಕ್ರಿಸ್ತರನ್ನು ಸ್ತುತಿಸಿ ಹಾಡುವ ಪಾಸ್ಖ ಸಂದೇಶ, ದೇವರ ವಾಕ್ಯದ ಸಂಭ್ರಮ, ದೀಕ್ಷಾ ಸ್ನಾನದ ಪ್ರಮಾಣ ವಚನ ನವೀಕರಣ, ಪರಮಪ್ರಸಾದ ಸಂಸ್ಕಾರದ ಶ್ರದ್ಧ ಭಕ್ತಿಯ ಜಾಗರಣೆ ಕಾರ್ಯಕ್ರಮ ಆಚರಿಸಲಾಯಿತು, ಹಾಗೂ ಬಲಿಪೂಜೆಯನ್ನು ಮಂಗಳೂರು ಜೆಪ್ಪು ಸೆಮಿನರಿಯ ಫಾ.ಮ್ಯಾಕ್ಸಿಂ ಡಿಸೋಜ ನೆರವೇರಿಸಿದರು. ಫಾ. ಪಾವ್ಲು ಕ್ರಾಸ್ತ ಸಹಕರಿಸಿದರು.
ಧರ್ಮ ಭಗಿನಿಯರು, ಕ್ರೈಸ್ತ ಭಕ್ತಾಧಿಗಳು, ಉಪಸ್ಥಿತರಿದ್ದರು.