Breaking News

ಕಳಂಜ ಬಾಳಿಲ ಸಹಕಾರಿ ಸಂಘದ ಬಾಳಿಲ ಶಾಖೆಯಲ್ಲಿ ರಬ್ಬರ್ ಖರೀದಿ ಕೇಂದ್ರ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕ್ಯಾಂಪ್ಕೋ ಲಿ. ಮಂಗಳೂರು ಇದರ ಸಹಯೋಗದೊಂದಿಗೆ ಕಳಂಜ‌ ಬಾಳಿಲ ಪ್ರಾಥಮಿಕ ಕೃ.ಪ.ಸ.ಸಂಘ ಬಾಳಿಲ ಶಾಖೆಯಲ್ಲಿ ಕಳಂಜ ಬಾಳಿಲ ರೈತ ಸ್ನೇಹಿತರ ಕೂಟದ ಸಹಕಾರದೊಂದಿಗೆ ರಬ್ಬರ್ ಖರೀದಿ ಕೇಂದ್ರದ ಉದ್ಘಾಟನೆಯು ಏ. 5ರಂದು ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಗತಿಪರ ಕೃಷಿಕರಾದ ಪಿ.ಜಿ. ಕೃಷ್ಣಮೂರ್ತಿ ಬಾಳಿಲ ರಬ್ಬರ್ ಖರೀದಿ ಕೇಂದ್ರವನ್ನು ಉದ್ಘಾಟಿಸಿದರು. ಮಾಜಿ ಜಿಲ್ಲಾ.ಪಂ. ಸದಸ್ಯ ಚಂದ್ರಶೇಖರ ಕಾಮತ್ ಐಸ್ ಕ್ರೀಂ ವಿಭಾಗವನ್ನು ಉದ್ಘಾಟಿಸಿದರು. ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ಮಾಜಿ ನಿರ್ದೇಶಕ ಶ್ರೀನಾಥ್ ರೈ ಬಾಳಿಲ ಸಿಮೆಂಟ್ ವಿಭಾಗವನ್ನು ಉದ್ಘಾಟಿಸಿದರು. ಕ್ಯಾಂಪ್ಕೋ ಸೀನಿಯರ್ ಮ್ಯಾನೇಜರ್ ಗೋವಿಂದ ಭಟ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್, ಪ್ರಗತಿಪರ ಕೃಷಿಕರಾದ ಜಿಮ್ಮಿ ಜೋಸೆಫ್, ಸುಬ್ರಹ್ಮಣ್ಯ ಕೋಟೆ, ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸವಿತಾ ಗುರುರಾಜ್ ಗೌರವ ಉಪಸ್ಥಿತರಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲಿನಿ ಪ್ರಸಾದ್ ಪ್ರಾರ್ಥಿಸಿದರು. ನಿರ್ದೇಶಕಿ ಶ್ರೀಮತಿ ಪುಷ್ಪಾವತಿ ಬಾಳಿಲ ಸ್ವಾಗತಿಸಿದರು. ನಿರ್ದೇಶಕ ಅಜಿತ್ ರಾವ್ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರಾದ ಶ್ರೀಮತಿ ಪಂಕಜಾಕ್ಷಿ ಪ್ರಸನ್ನ ಮಡ್ತಿಲ, ಶುಭಕುಮಾರ್ ಬಾಳೆಗುಡ್ಡೆ, ಕರುಣಾಕರ ಶೆಟ್ಟಿ ನಾಲ್ಗುತ್ತು, ಕೆ.ಎಲ್. ಸುಬ್ರಹ್ಮಣ್ಯ ಕಾವಿನಮೂಲೆ, ಮೇದಪ್ಪ ಗೌಡ ತಂಟೆಪ್ಪಾಡಿ, ಭಾರತೀಶಂಕರ ಆದಳ ಸೇರಿದಂತೆ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.