ಊರುಬೈಲು ಶ್ರೀ ಭಗವಾನ್ ಸಂಘದ ವಾರ್ಷಿಕ ಮಹಾಸಭೆಯು ಎ. 4 ರಂದು ಸಂಘದ ಕಚೇರಿ ಭಗವಾನ್ ಫಾರ್ಮ್ಸ್ನಲ್ಲಿ ನಡೆಯಿತು.
ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದೆ ಮಂಡಿಸಿ, ಅನುಮೋದನೆ ಪಡೆಯಲಾಯಿತು. ಮುಂದಿನ ಅವಧಿಯ ಕ್ರಿಯಾಯೋಜನೆಯನ್ನು ಸಿದ್ದಪಡಿಸಿಕೊಳ್ಳಲಾಯಿತು.ನಿಕಟಪೂರ್ವ ಅಧ್ಯಕ್ಷ ರವಿರಾಜ್ ಹೊಸೂರು ಮತ್ತು ಕಾರ್ಯದರ್ಶಿ ಶಶಿಧರ್ ಎಕ್ಕಡ್ಕರವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಪಯಸ್ವಿನಿ ಸೊಸೈಟಿ ಅಧ್ಯಕ್ಷ ಅನಂತ್ ಊರುಬೈಲ್, ಮಾಜಿ ಅದ್ಯಕ್ಷ ಪ್ರಶಾಂತ್ ಊರುಬೈಲು, ಯಶವಂತ ನಾರಾಲು ಉಪಸ್ಥಿತರಿದ್ದರು.
ಸಂಘದ ನೂತನ ಅದ್ಯಕ್ಷರಾಗಿ ದಿನೇಶ್ ಸಣ್ಣಮನೆ ಮತ್ತು ಕಾರ್ಯದರ್ಶಿಯಾಗಿ ಯತೀಶ್ ಹನಿಯಡ್ಕ ರವರನ್ನು ಅಭಿನಂದಿಸಲಾಯಿತು